ಸುಳ್ಯ: ದಿನಸಿ ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸಲು ಸಡಿಲಿಕೆ ನೀಡಿದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಉಪ್ಪಿನಂಗಡಿ, ನೆಲ್ಯಾಡಿಯಲ್ಲಿ ಅಂಗಡಿ, ಪೆಟ್ರೋಲ್ ಪಂಪ್ಗಳಲ್ಲಿ ಭಾರೀ ಜನಜಂಗುಳಿ ಕಂಡು ಬಂತು.
ಮುಚ್ಚಿದ ಅಂಗಡಿ ತೆರೆಸಿ ಗ್ರಾಮದ ಜನರಿಗೆ ಸಹಕಾರ ನೀಡಿದ ಎಸಿ
ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆದಿದ್ದು ಜನ ದಿನ ಬಳಕೆ ವಸ್ತುಗಳ ಖರೀದಿಗೆ ಈಗಾಗಲೇ ಸರ್ಕಾರ ಸಮ್ಮತಿ ನೀಡಿದೆ. ಇದರ ನಡುವೆ ಕಡಬದಲ್ಲಿ ಸರ್ಕಾರ ನಿಯಮಕ್ಕೆ ವಿರುದ್ಧವಾಗಿ ಮುಚ್ಚಿಸಿದ ದಿನಸಿ ಅಂಗಡಿಗಳನ್ನು ಪುತ್ತೂರು ಎಸಿ ಯತೀಶ್ ಉಳ್ಳಾಲ ತೆರೆಸಿ ಸಾರ್ವಜನಿಕರ ಉಪಯೋಗಕ್ಕೆ ದಾರಿ ಮಾಡಿಕೊಟ್ಟರು.
ಗ್ರಾಮ ಪಂಚಾಯತಿ ಮುಚ್ಚಿದ ಅಂಗಡಿ ಸಾರ್ವಜನಿಕರ ಸಹಾಯಕವಾದ ಪುತ್ತೂರು ಎಸಿ
ಈ ಮಧ್ಯ ಕಡಬ ಗ್ರಾಮ ಪಂಚಾಯತ್ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ನಿಯಮ ಜಾರಿಮಾಡಿದ್ದು, ಸ್ಥಳೀಯರ ಆಕ್ರೋಶ ಕಾರಣವಾಯಿತು. ಇನ್ನು ಸ್ಥಳಕ್ಕೆ ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ ಭೇಟಿ ನೀಡಿ ಮುಚ್ಚಿದ್ದ ಅಂಗಡಿಗಳನ್ನು ತೆರೆಸಿದರು.
ಅಲ್ಲದೆ ನಾಳೆಯಿಂದ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಜನರಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದರು.