ಸುಳ್ಯ(ದಕ್ಷಿಣ ಕನ್ನಡ):ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬಲ್ಲಿ ಜಾತಿ, ಧರ್ಮಗಳನ್ನು ಮೀರಿ ಜನರಿಂದ ಜನರಿಗಾಗಿಯೇ 'ಗ್ರಾಮಸೇತು' ಎಂಬ ಸೇತುವೆ ನಿರ್ಮಾಣವಾಗುತ್ತಿದೆ. ಕೊನೆಯ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಗುತ್ತಿಗಾರು ಚರ್ಚಿನ ಧರ್ಮಗುರುಗಳಾದ ರೆ.ಫಾ.ಆದರ್ಶ್ ಜೋಸೆಫ್ ಅವರು ಸ್ಥಳೀಯ ಯುವಕರೊಂದಿಗೆ ಕೆಲಸ ಮಾಡಿಸುತ್ತಿದ್ದಾರೆ.
ಧರ್ಮಾತೀತವಾಗಿ 'ಗ್ರಾಮಸೇತು' ನಿರ್ಮಾಣ; ಕೈಜೋಡಿಸಿದ ಚರ್ಚ್ ಧರ್ಮಗುರು - ಗ್ರಾಮಸೇತು
ಮೂಲಭೂತ ಸೌಲಭ್ಯಗಳಿಗಾಗಿ ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಕೆಲವೊಮ್ಮೆ ಫಲ ನೀಡುವುದಿಲ್ಲ. ಸರ್ಕಾರದ ಅನುದಾನ ಅಥವಾ ನೆರವಿಗೆ ಎದುರು ನೋಡದೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬಲ್ಲಿ ಜನರೇ ಸ್ವಯಂ ಪ್ರೇರಣೆಯಿಂದ 'ಗ್ರಾಮಸೇತು' ಎಂಬ ಸೇತುವೆ ನಿರ್ಮಿಸಿದ್ದಾರೆ.
ಮೊಗ್ರ ಎಂಬ ಈ ಪುಟ್ಟ ಹಳ್ಳಿಯಲ್ಲಿ ಹರಿಯುತ್ತಿರುವ ಕಿರು ನದಿಗೆ ಒಂದು ಸೇತುವೆ ನಿರ್ಮಾಣದ ಬಗ್ಗೆ ಇಲ್ಲಿನ ಸ್ಥಳೀಯರು ಪ್ರಧಾನಿಗೆ ಪತ್ರ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮೇಲೆ ಮನವಿ ಮಾಡುತ್ತಲೇ ಬಂದಿದ್ದರು. ಮಾತ್ರವಲ್ಲದೆ ಪತ್ರಿಕೆ, ದೃಶ್ಯ ಮಾಧ್ಯಮದ ಮೂಲಕವು ಗಮನ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಫಲ ಮಾತ್ರ ಶೂನ್ಯವಾಗಿತ್ತು.
ಕೊನೆಗೆ ಒಂದು ತೀರ್ಮಾನಕ್ಕೆ ಬಂದ ಸ್ಧಳೀಯರು ಸ್ವತಃ ಸೇತುವೆ ನಿರ್ಮಾಣಕ್ಕೆ ಬಂದಿದ್ದಾರೆ. ಇದರ ಪ್ರತಿಫಲವೆಂಬತೆ ಇದೀಗ ಇಲ್ಲೊಂದು ಸುಂದರವಾದ ಕಿರು ಸೇತುವೆ ನಿರ್ಮಾಣವಾಗಿದೆ. ಧರ್ಮಾತೀತವಾಗಿ ಸ್ಥಳೀಯರು, ಅಕ್ಕಪಕ್ಕದ ಯುವಕರು ಏಕ ಮನಸ್ಸಿನಿಂದ ಸೇತುವೆ ನಿರ್ಮಾಣದ ಕಾರ್ಯಕ್ಕೆ ಮುಂದಾದರು. ಇವರ ನಡುವೆ ಗುತ್ತಿಗಾರು ಚರ್ಚಿನ ಧರ್ಮಗುರು ರೆ.ಫಾ ಆದರ್ಶ್ ಜೋಸೆಫ್ ಅವರು ಸ್ಥಳೀಯರೊಂದಿಗೆ ಸೇತುವೆಯ ಕೊನೆಯ ಹಂತದ ಕೆಲಸಕ್ಕೆ ಕೈಜೋಡಿಸಿದ್ದಾರೆ. ಮಾತ್ರವಲ್ಲದೆ ಸೇತುವೆಯ ಕೆಲಸದಲ್ಲಿ ನಿರತರಾಗಿರುವ ಸಮಸ್ತ ಜನರಿಗೆ ರೆ.ಫಾ ಆದರ್ಶ್ ಜೋಸೆಫ್ ಅವರು ಶುಭವನ್ನು ಕೋರಿದ್ದಾರೆ.