ಮಂಗಳೂರು : ಪ್ಲ್ಯಾಟ್ ವೊಂದರ ಬಾಲ್ಕನಿಯಲ್ಲಿರುವ ಕರ್ಟನ್ ಸರಿಪಡಿಸಲು ಹೋಗಿ 5ನೇ ಮಹಡಿಯಿಂದ ಬಿದ್ದು ಬಾಲಕಿ ಮೃತಪಟ್ಟ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ. ಸೆಹರ್ ಇಮ್ತಿಯಾಜ್(15) ಮೃತಪಟ್ಟ ಬಾಲಕಿ. ಈಕೆ ನಗರದ ಕಂಕನಾಡಿಯ ವಿಶ್ವಾಸ್ ಕ್ರೌನ್ ಎಂಬ ಅಪಾರ್ಟ್ ಮೆಂಟ್ ನಿವಾಸಿ ಇಮ್ತಿಯಾಜ್ ಎಂಬವರ ಪುತ್ರಿ.
ಮಂಗಳೂರಿನಲ್ಲಿ ಬಾಲ್ಕನಿ ಕರ್ಟನ್ ಸರಿಪಡಿಸಲು ಹೋಗಿ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು! - ಬಾಲ್ಕನಿಯಿಂದ ಬಿದ್ದು ಬಾಲಕಿ ಸಾವು
5ನೇ ಮಹಡಿಯಿಂದ ಆಯತಪ್ಪಿ ಬಿದ್ದ ಹತ್ತನೇ ತರಗತಿ ಹುಡಗಿ. ಕೂಡಲೇ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಬಾಲಕಿ ನಿನ್ನೆ ಸಂಜೆ 4.30ರ ಸುಮಾರಿಗೆ ತಮ್ಮ ಫ್ಲ್ಯಾಟ್ನ ಬಾಲ್ಕನಿಯ ಸೈಡ್ ಕರ್ಟನ್ ಅನ್ನು ಕುರ್ಚಿಯ ಮೇಲೆ ಹತ್ತಿ ಸರಿಪಡಿಸುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ 5ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಪೋಷಕರು ಗಾಯಗೊಂಡ ಬಾಲಕಿಯನ್ನು ಕಂಕನಾಡಿ ಆಸ್ಪತ್ರೆಗೆ ದಾಖಲಿಸಿದರಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈಕೆ ಬಿಜೈನ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದಳು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಅನುದಾನಿತ ಶಾಲೆಯ ವೇತನ ಬಿಡುಗಡೆಗೆ ಲಂಚ: ಎಸಿಬಿ ಬಲೆಗೆ ಬಿದ್ದ ಅಫ್ಜಲಪುರ ಬಿಇಒ