ಕರ್ನಾಟಕ

karnataka

ETV Bharat / city

ಕತಾರ್​ ವಿಮಾನದಲ್ಲಿ ಮಂಗಳೂರಿನ ಪ್ರಯಾಣಿಕರಿಲ್ಲ: ಬೆಂಗಳೂರಿನಲ್ಲೇ ಲ್ಯಾಂಡಿಂಗ್​ - ಮಂಗಳೂರು ಸುದ್ದಿ

ಕತಾರ್​ನ ದೋಹದಿಂದ ಹೊರಟು ಬೆಂಗಳೂರಿನ ಮೂಲಕ ಮಂಗಳೂರಿಗೆ ತಲುಪಬೇಕಿದ್ದ ವಿಮಾನದಲ್ಲಿ ಮಂಗಳೂರಿನ ಪ್ರಯಾಣಿಕರಿಲ್ಲದ ಕಾರಣ ಬೆಂಗಳೂರಿನಿಂದ ಪ್ರಯಾಣ ಬೆಳೆಸಿಲ್ಲ.

No passengers to Mangalore from Qatar
ಕತಾರ್ ದೋಹದ ವಿಮಾನದಲ್ಲಿ ಮಂಗಳೂರಿನ ಪ್ರಯಾಣಿಕರಿಲ್ಲ..ಬೆಂಗಳೂರಿನಿಂದ ಹೊರಡದ ವಿಮಾನ

By

Published : May 23, 2020, 10:51 AM IST

ಮಂಗಳೂರು:ಕತಾರ್​ನ ದೋಹದಿಂದ ಮಂಗಳೂರಿಗೆ ಹೊರಟ ವಿಮಾನದಲ್ಲಿ ಮಂಗಳೂರಿನ ಪ್ರಯಾಣಿಕರಿಲ್ಲದ ಕಾರಣ ವಿಮಾನ ಬೆಂಗಳೂರಿನಿಂದ ಪ್ರಯಾಣ ಮುಂದುವರೆಸಿಲ್ಲ.

ಶುಕ್ರವಾರ ಸಂಜೆ ಕತಾರ್ ರಾಜಧಾನಿ ದೋಹದಿಂದ ಹೊರಟ ವಿಮಾನ ಬೆಂಗಳೂರಿನ ಮೂಲಕ ಮಂಗಳೂರಿಗೆ ತಲುಪಬೇಕಿತ್ತು. ಆದರೆ ಈ ವಿಮಾನದಲ್ಲಿ ಮಂಗಳೂರು ಪ್ರಯಾಣಿಕರಿಲ್ಲದ ಕಾರಣ ಬೆಂಗಳೂರಿನಿಂದ ಪ್ರಯಾಣ ಬೆಳೆಸಿಲ್ಲ.

ಮಂಗಳೂರಿಗೆ ಮೇ 12 ಮತ್ತು 18ರಂದು ದುಬೈನಿಂದ ಹಾಗೂ ಮೇ 20ರಂದು ಮಸ್ಕತ್​ನಿಂದ ವಿಮಾನ ಆಗಮಿಸಿತ್ತು. ಶುಕ್ರವಾರ ಕತಾರ್​ನ ದೋಹದಿಂದ ಹೊರಟ ವಿಮಾನದಲ್ಲಿ ಮಂಗಳೂರು ಪ್ರಯಾಣಿಕರು ಬರುವ ನಿರೀಕ್ಷೆಯಿತ್ತು.

ABOUT THE AUTHOR

...view details