ಮಂಗಳೂರು: ಬೈಕ್ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪೊಂದು ದಾಳಿ (Attack on students) ನಡೆಸಿದ ಘಟನೆ ನಗರದ ಸುರತ್ಕಲ್ನಲ್ಲಿ ರಾತ್ರಿ ವೇಳೆ ಜರುಗಿದೆ.
ಮಂಗಳೂರು: BSC ವಿದ್ಯಾರ್ಥಿ, ವಿದ್ಯಾರ್ಥಿನಿ ಮೇಲೆ ದಾಳಿ..6 ಮಂದಿ ಬಂಧನ - ದಕ್ಷಿಣ ಕನ್ನಡ ಜಿಲ್ಲಾ ಸುದ್ದಿ
ನಿನ್ನೆ ರಾತ್ರಿ ವಿದ್ಯಾರ್ಥಿಗಳಿಬ್ಬರು ಬೈಕ್ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪೊಂದು ದಾಳಿ (Attack on students) ನಡೆಸಿದ ಘಟನೆ ನಗರದ ಸುರತ್ಕಲ್ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ 6 ಮಂದಿಯನ್ನು ಬಂಧಿಸಲಾಗಿದೆ.
ನಿನ್ನೆ ರಾತ್ರಿ ವಿದ್ಯಾರ್ಥಿಗಳಿಬ್ಬರು ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ತಡೆದು, ಯುವಕರ ಗುಂಪೊಂದು ದಾಳಿ ನಡೆಸಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್ ಮತ್ತು ಸುಕೇಶ್ ಸೇರಿ 6 ಮಂದಿಯನ್ನು(Six persons arrested) ಬಂಧಿಸಲಾಗಿದೆ.
ಘಟನೆ ವಿವರ: ಸುರತ್ಕಲ್ನ ಮುಕ್ಕ ಶ್ರೀನಿವಾಸ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ ಮೊಹಮ್ಮದ್ ಯಾಸೀನ್ ತನ್ನ ಕಾಲೇಜು ಸಹಪಾಠಿ ವಿದ್ಯಾರ್ಥಿನಿಯನ್ನು ರಾತ್ರಿ 10 ಗಂಟೆಗೆ ಮುಕ್ಕದಿಂದ ಆಕೆಯ ಅಪಾರ್ಟ್ ಮೆಂಟ್ಗೆ ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಅಪಾರ್ಟ್ಮೆಂಟ್ಗೆ ಬರುವ ವೇಳೆ ಅಲ್ಲಿಗೆ ಬಂದ ಕೆಲ ಯುವಕರು, ಯುವಕನ ಹೆಸರು ತಿಳಿದುಕೊಂಡು ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಯುವತಿಯ ಮೈ ಮೇಲೆ ಕೈ ಹಾಕಿ ಮಾನಹಾನಿಯನ್ನೂ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯುವಕ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು.