ಕರ್ನಾಟಕ

karnataka

ETV Bharat / city

ಸಿನಿಪ್ರಿಯರನ್ನು 'ಮೂಕವಿಸ್ಮಿತ'ರಾಗಿಸಲು ಬರುತ್ತಿದೆ ಟೊಳ್ಳುಗಟ್ಟಿ ನಾಟಕ - kannadanews

ಖ್ಯಾತ ನಾಟಕಕಾರ ಟಿ.ಪಿ.ಕೈಲಾಸಂ ಅವರ ಟೊಳ್ಳುಗಟ್ಟಿ ಎಂಬ ಪ್ರಸಿದ್ಧ ನಾಟಕ ಮೂಕವಿಸ್ಮಿತ ಎಂಬ ಚಲನಚಿತ್ರವಾಗಿ ಮೇ 17ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

ಮೂಕವಿಸ್ಮಿತ

By

Published : May 7, 2019, 8:02 PM IST

ಮಂಗಳೂರು: ಸಾವಿರಾರು ಪ್ರದರ್ಶನ ಕಂಡ ಟೊಳ್ಳುಗಟ್ಟಿ ನಾಟಕ ಈಗ ಚಲನಚಿತ್ರವಾಗಿ ತೆರೆಗೆ ಬರಲಿದೆ.

ಜೈಗುರು ಕ್ರಿಯೇಷನ್ ಅರ್ಪಿಸುವ ಈ ಚಲನಚಿತ್ರವನ್ನು ಗುರುದತ್ ಶ್ರೀಕಾಂತ್ ಎಂಬ ಯುವ ನಿರ್ದೇಶಕ ಪರಿಕಲ್ಪನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಬರೆದು ನಿರ್ದೇಶನ ಮಾಡಿದ್ದಾರೆ.

ಟಿಪಿಕಲ್ ಶಬ್ದಗಳನ್ನು ಬಳಸಿ, ಕಂಗ್ಲಿಷ್ ಭಾಷೆಯನ್ನು(ಕನ್ನಡ-ಇಂಗ್ಲಿಷ್ ಮಿಶ್ರಿತ ಭಾಷೆ) ಬಳಸಿ ಪ್ರಸಿದ್ಧಿ ಪಡೆದ ಟಿ.ಪಿ.ಕೈಲಾಸಂ ಅವರ ವಿಶಿಷ್ಟ ಶೈಲಿಯ ಸಂಭಾಷಣೆಯನ್ನು ಚಿತ್ರದಲ್ಲಿ ಅದ್ಭುತವಾಗಿ ಬಳಸಿಕೊಳ್ಳಲಾಗಿದೆ‌. ಆದರೆ ಪ್ರೇಕ್ಷಕರಿಗೆ ಯಾವುದೇ ರೀತಿಯ ಭಾಷೆಯ ಸಮಸ್ಯೆಯಾಗದಂತೆ ಸಂಭಾಷಣೆಯನ್ನು‌ ಬಳಸಿಕೊಳ್ಳಲಾಗಿದೆ ಎಂದು ಸಿನಿಮಾದ ಪ್ರಮುಖ ನಟ ಸಂದೀಪ್ ಮಲಾನಿ ಹೇಳಿದರು.

ಸಂದೀಪ್​ ಮಲಾನಿ

ಅನೇಕ ಚಿತ್ರಗಳಲ್ಲಿ ನಟಿಸಿದ ನನಗೆ ಮೂಕವಿಸ್ಮಿತ ಚಿತ್ರದ ಹಿರಿಯಣ್ಣನ ಪಾತ್ರ ಅತೀವ ತೃಪ್ತಿ ತಂದಿದೆ. ನನ್ನ ಇಪ್ಪತ್ತೈದು ವರ್ಷಗಳ ನಿರ್ದೇಶನ ಹಾಗೂ ನಟನೆಯ ಬದುಕಿನಲ್ಲಿ ಅತ್ಯಂತ ನೆನಪಿನಲ್ಲಿ ಉಳಿಯುವಂತಹ ಪಾತ್ರವಾಗಿದೆ. ಈ ಸಿನಿಮಾಕ್ಕೆ ಪ್ರಶಸ್ತಿಯೂ ಬರಬಹುದು ಎಂಬ ನಿರೀಕ್ಷೆಯೂ ಇದೆ ಎಂದ್ರು.

ಟೊಳ್ಳುಗಟ್ಟಿ ನಾಟಕ 1920ರ ಕಾಲಘಟ್ಟದ ಕಥೆಯನ್ನು ಒಳಗೊಂಡಿರುವಂಥದ್ದು. ಆದರೆ ಸಿನಿಮಾ ರೂಪಕ್ಕೆ ತಂದಾಗ ಕಥೆಯನ್ನು 1950ರ ಕಾಲಕ್ಕೆ ಬದಲಾವಣೆ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವದ ಕಥಾಹಂದರವುಳ್ಳ ಈ ಸಿನಿಮಾವನ್ನು ಅತೀ ಕಡಿಮೆ ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ಬಹುತೇಕ ನಾಟಕ ರಂಗದ ಕಲಾವಿದರೇ ಬಣ್ಣ ಹಚ್ಚಿದ್ದು, ಉಳಿದಂತೆ ಚಿತ್ರಕ್ಕೆ ಡಾ. ಚಿನ್ಮಯ ಎಂ. ರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ABOUT THE AUTHOR

...view details