ಕಡಬ: ಸಚಿವ ಸ್ಥಾನ ದೊರೆತಿರುವುದು ಸುಳ್ಯ ಕ್ಷೇತ್ರದ ಕಾರ್ಯಕರ್ತರಿಗೆ ಸಂದ ಜಯ. ನನಗೆ ಸಿಕ್ಕ ಅವಕಾಶವನ್ನು ಸ್ವೀಕರಿಸಿ ಸಮರ್ಥವಾಗಿ ನಿರ್ವಹಿsಉತ್ತೇನೆ. ಈ ಮೂಲಕ ಪಕ್ಷ ಸಂಘಟನೆ ಮಾಡುವುದರೊಂದಿಗೆ ಕಾರ್ಯಕರ್ತರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಜನರ ಪ್ರೀತಿ ವಿಶ್ವಾಸ ಗಳಿಸುವುದು ನನ್ನ ಗುರಿ ಎಂದು ಸಚಿವ ಎಸ್.ಅಂಗಾರ ಹೇಳಿದರು.
ಸಚಿವ ಸ್ಥಾನ ದೊರೆತಿರುವುದು ಸುಳ್ಯ ಕ್ಷೇತ್ರದ ಕಾರ್ಯಕರ್ತರಿಗೆ ಸಂದ ಜಯ: ಅಂಗಾರ - ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಸಭಾ ವಠಾರ
ಸುಳ್ಯ ಕ್ಷೇತ್ರದ ಕಡಬ ತಾಲೂಕಿನ ಬೆಳಂದೂರು, ಕಡಬ, ನೆಲ್ಯಾಡಿ ಶಕ್ತಿ ಕೇಂದ್ರಗಳ ವತಿಯಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಸಭಾ ವಠಾರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಸಚಿವ ಅಂಗಾರ ಮಾತನಾಡಿದರು.
ಸುಳ್ಯ ಕ್ಷೇತ್ರದ ಕಡಬ ತಾಲೂಕಿನ ಬೆಳಂದೂರು, ಕಡಬ, ನೆಲ್ಯಾಡಿ ಶಕ್ತಿ ಕೇಂದ್ರಗಳ ವತಿಯಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಸಭಾ ವಠಾರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಎಂದಿಗೂ ಪ್ರಚಾರ ಬಯಸವುದಿಲ್ಲ. ಆದರೆ ಸಂಘಟನೆಯ ಬಲಕ್ಕಾಗಿ ಪ್ರಚಾರದ ಅಗತ್ಯವಿದೆ. ಬಿಜೆಪಿ ಸರ್ಕಾರದಿಂದ ಹಲವಾರು ಯೋಜನೆಗಳು ಅನುಷ್ಠಾನವಾದರೂ ಇದರ ಲಾಭ ಪಡೆಯುವಲ್ಲಿ ಕಾಂಗ್ರೆಸ್ಸಿಗರು ಹವಣಿಸುತ್ತಾರೆ. ಇದಕ್ಕಾಗಿ ಪ್ರಚಾರ ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ. ಯಾವತ್ತೂ ಸಚಿವ ಸ್ಥಾನವನ್ನು ಬಯಸಿದ್ದಿಲ್ಲ. ಆದ್ರೆ ಕಾರ್ಯಕರ್ತರ ಬಯಕೆಗೆ ಒತ್ತು ನೀಡಬೇಕಾಗಿರುವುದು ಅಗತ್ಯವಾಗಿದೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.