ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ (ಶುಕ್ರವಾರ) ಕೊರೊನಾ ಕರ್ಫ್ಯೂ ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದರೂ ಕರ್ಫ್ಯೂ ಉಲ್ಲಂಘನೆ ಮಾಡಿ ಜನರು ಓಡಾಡುತ್ತಿದ್ದಾರೆ. ಈ ಹಿನ್ನೆಲೆ ಕರ್ಫ್ಯೂ ಬಿಗಿಯಾಗಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿತ್ತು. ಅದರಂತೆ ಇಂದಿನಿಂದಲೇ ಬಿಗಿಯಾದ ಕರ್ಫ್ಯೂ ಜಾರಿಯಾಗಲಿದೆ.
ಹೊಸ ಆದೇಶದ ಪ್ರಕಾರ ಎಪಿಎಂಸಿ, ದಿನಸಿ ಅಂಗಡಿ ಮತ್ತು ಅವಶ್ಯಕ ಸೇವೆ ಒದಗಿಸುವ ಎಲ್ಲಾ ಅಂಗಡಿಗಳು ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಲಾಗಿದೆ. 10 ಗಂಟೆಗೆ ಎಲ್ಲಾ ಅಂಗಡಿಗಳ ಮುಚ್ಚಬೇಕು ಮತ್ತು ನಿಗದಿಪಡಿಸಿದ ಸಮಯದ ನಂತರ ಯಾವುದೇ ಮಾರಾಟಗಾರರು ಮತ್ತು ಖರೀದಿದಾರರ ಓಡಾಟ ನಿಷೇಧಿಸಲಾಗಿದೆ. ಆನ್ ಲೈನ್ ಸೇವಾ ಪೂರೈಕೆದಾರರಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಮೇ 15ರ ನಂತರ ಅನುಮತಿ ಪಡೆದ ಸಮಾರಂಭ ಸೇರಿದಂತೆ ಮದುವೆ ಮತ್ತು ಇತರೆಲ್ಲ ಸಮಾರಂಭ ನಿಷೇಧಿಸಲಾಗಿದೆ. ಅನಗತ್ಯ ಸಂಚರಿಸುವ ವಾಹನಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಲಾಗಿದೆ.