ಮಂಗಳೂರು: ಮಹಿಳೆ ಒಳ ಉಡುಪಿನಲ್ಲಿ ಸಾಗಿಸುತ್ತಿದ್ದ 739 ಗ್ರಾಂ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ತಲಂಗರ ಎಂಬಲ್ಲಿನ ಮಹಿಳೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದ ಆರೋಪಿ. ಇಂದು ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದರು. ಇವರನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ ಚಿನ್ನ ಪತ್ತೆಯಾಗಿದೆ.
ಇದನ್ನೂ ಓದಿ:ಉಪ್ಪಿನಂಗಡಿ ಗಲಭೆ, ಲಾಠಿಚಾರ್ಜ್ ಪ್ರಕರಣ: 10 ಮಂದಿ ಪಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಚಿನ್ನವನ್ನು ಪೇಸ್ಟ್ ರೂಪದಲ್ಲಿ ಪ್ಲಾಸ್ಟಿಕ್ ಪೌಚ್ ನಲ್ಲಿ ಹಾಕಿ ಒಳ ಉಡುಪಿನ ಒಳಭಾಗದಲ್ಲಿಟ್ಟು ಹೊಲಿಗೆ ಹಾಕಿ ಸಾಗಾಟ ಮಾಡುತ್ತಿದ್ದರು. 739 ಗ್ರಾಂ ಚಿನ್ನ ಪತ್ತೆಯಾಗಿದ್ದು ಇದರ ಮೌಲ್ಯ ರೂ 36,43,270 ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದುಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯ ವಿಚಾರಣೆ ನಡೆಸುತ್ತಿದ್ದಾರೆ.