ಕರ್ನಾಟಕ

karnataka

ETV Bharat / city

ಮಂಗಳೂರಲ್ಲಿ ನವಜಾತ ಶಿಶು ಅದಲು-ಬದಲು ಆರೋಪ​: DNA ಮಾದರಿ ಹೈದರಾಬಾದ್‌ಗೆ ರವಾನೆ - baby exchange case

ನವಜಾತ ಶಿಶು ಅದಲು ಬದಲಾಗಿರುವ ಬಗ್ಗೆ ಅನುಮಾನಗೊಂಡ ಪೋಷಕರು, ನಗರದ ಬಂದರು ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ತನಿಖೆ ಮುಂದುವರಿದಿದ್ದು, ಡಿಎನ್​ಎ(DNA) ಮಾದರಿಯನ್ನು ಹೈದರಾಬಾದ್​ ಲ್ಯಾಬ್​ಗೆ ಕಳುಹಿಸಲಾಗಿದೆ.

lady gotion hospital baby exchange case
ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ

By

Published : Oct 20, 2021, 12:07 PM IST

ಮಂಗಳೂರು:ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲಾಗಿದೆ ಎಂಬ ಪೋಷಕರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಹಾಗು ತಂದೆ ತಾಯಿಯ ಡಿಎನ್‌ಎ ತಪಾಸಣೆಗೆ ನ್ಯಾಯಾಲಯ‌ ಅನುಮತಿ ನೀಡಿತ್ತು. ಈ ಹಿನ್ನೆಲೆ ಮಂಗಳವಾರ ಪೋಷಕರು ಹಾಗು ಮಗುವಿನ ಡಿಎನ್‌ಎ ಸ್ಯಾಂಪಲ್ ಪಡೆಯಲಾಗಿದ್ದು, ತಪಾಸಣೆಗಾಗಿ ಹೈದರಾಬಾದ್‌ನ ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.

ಲೇಡಿಗೋಷನ್ ಆಸ್ಪತ್ರೆಯಲ್ಲಿ ತಮ್ಮ ಮಗು ಅದಲು ಬದಲು ಆಗಿದೆ ಎಂದು ಆರೋಪಿಸಿ ಕುಂದಾಪುರ ನಿವಾಸಿ ಮುಸ್ತಾ ಎಂಬವರು ನೀಡಿರುವ ದೂರಿನ ಆಧಾರದಲ್ಲಿ ಬಂದರು ಪೊಲೀಸ್ ಠಾಣೆಯಲ್ಲಿ ಮಗು ಅಪಹರಣ ದೂರು ದಾಖಲಾಗಿತ್ತು.

ಇದನ್ನೂ ಓದಿ:ಹೆರಿಗೆಯಾದಾಗ ಹೆಣ್ಣು ಮಗು.. ಪೋಷಕರ ಕೈಗೆ ಕೊಟ್ಟದ್ದು ಗಂಡು ಮಗು.. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎಡವಟ್ಟು..

ನ್ಯಾಯಾಲಯ ನೀಡಿರುವ ಆದೇಶದ ಅನ್ವಯ ಮಂಗಳವಾರ ಮಗು ಹಾಗು ತಂದೆ-ತಾಯಿಯ ಡಿಎಎನ್ ತಪಾಸಣೆ ನಡೆಯಿತು. ಬಳಿಕ ಅದರ ಸ್ಯಾಂಪಲ್​​ನ್ನು ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೂರು ತಿಂಗಳೊಳಗೆ ಇದರ ವರದಿ ಬರಲಿದ್ದು, ಈ ವರದಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.

ಕುಂದಾಪುರದ ಮಹಿಳೆ ಹೆರಿಗೆಗೆಂದು ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೆರಿಗೆಯ ಸಂದರ್ಭ ಹೆಣ್ಣು ಮಗು ಎಂದು ದಾಖಲೆಯಲ್ಲಿ ನಮೂದಿಸಿ, ಬಳಿಕ ಗಂಡು ಮಗುವನ್ನು ನೀಡಿದ್ದರು ಎಂದು ಪೋಷಕರು ಆರೋಪಿದ್ದರು. ಬಳಿಕ ಪೋಷಕರು ನಗರದ ಬಂದರು ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.

ಇದನ್ನೂ ಓದಿ:ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ : ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಅನುಮತಿ

ABOUT THE AUTHOR

...view details