ಮಂಗಳೂರು:ಹೆಲ್ಮೆಟ್ ಧರಿಸದೆ ಬೈಕ್ನಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳಾ ಫಾರೆಸ್ಟ್ ಗಾರ್ಡ್ವೋರ್ವರಿಗೆ ದಂಡ ವಿಧಿಸಿದ ಪ್ರಕರಣ ನಗರದಲ್ಲಿ ನಡೆದಿದೆ.
ಹೆಲ್ಮೆಟ್ ಧರಿಸದೆ ಬೈಕ್ನಲ್ಲಿ ಮಹಿಳಾ ಫಾರೆಸ್ಟ್ ಗಾರ್ಡ್ ಪ್ರಯಾಣ: ದಂಡ ಜಡಿದ ಪೊಲೀಸ್ರು
ಹೆಲ್ಮೆಟ್ ಧರಿಸದೆ ಬೈಕ್ನಲ್ಲಿ ಹಿಂಬದಿ ಚಾಲಕರಾಗಿ ಪ್ರಯಾಣಿಸುತ್ತಿದ್ದ ಮಹಿಳಾ ಫಾರೆಸ್ಟ್ ಗಾರ್ಡ್ ಫೋಟೋವೊಂದು ಕರಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಖಾಕಿ ಸಮವಸ್ತ್ರಧಾರಿಗಳಿಂದ ಸಾರಿಗೆ ನಿಯಮ ಉಲ್ಲಂಘನೆ ಎಂದು ನೆಟ್ಟಿಗರು ಫೋಟೊ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ಫಾರೆಸ್ಟ್ ಗಾರ್ಡ್ಗೆ ದಂಡ ವಿಧಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಮಹಿಳಾ ಗಾರ್ಡ್, ನಗರದ ಬಲ್ಮಠ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ತಮ್ಮ ಪತಿಯೊಂದಿಗೆ ಪ್ರಯಾಣ ಮಾಡಿದ್ದರು. ಇದನ್ನು ಕಂಡ ಹಿಂಬದಿ ವಾಹನ ಚಾಲಕರು ಇವರ ಫೋಟೊ ತೆಗೆದು ಖಾಕಿ ಸಮವಸ್ತ್ರಧಾರಿಗಳಿಂದ ಸಾರಿಗೆ ನಿಯಮ ಉಲ್ಲಂಘನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್ ಆಗುತ್ತಿದ್ದಂತೆಯೇ ಮಂಗಳೂರು ನಗರ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ವಾಹನದ ನಂಬರ್ ಪ್ಲೇಟ್ ಆಧಾರದಲ್ಲಿ ಸ್ವಯಂ ಪ್ರೇರಿತವಾಗಿ ಮಹಿಳಾ ಫಾರೆಸ್ಟ್ ಗಾರ್ಡ್ ಅವರನ್ನು ಠಾಣೆಗೆ ಕರೆದು ದಂಡ ವಿಧಿಸಿದ್ದಾರೆ.