ಕರ್ನಾಟಕ

karnataka

ETV Bharat / city

ಸಾರ್ವಜನಿಕರಿಗೆ ತೊಂದರೆಯಾಗದಂತೆ ಮರಳು ಪೂರೈಕೆಯಾಗಲಿ: ಕೋಟಾ ಶ್ರೀನಿವಾಸ ಪೂಜಾರಿ

ಸಾರ್ವಜನಿಕರಿಗೆ ಯಾವ ರೀತಿಯ ತೊಂದರೆ ಇಲ್ಲದೆ ಸುಲಭ ರೀತಿಯಲ್ಲಿ ಮರಳು ಪೂರೈಕೆ ಆಗಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Kn_Mng_08_Sand_Meeting_Script_KA10015
ಸಾರ್ವಜನಿಕರಿಗೆ ತೊಂದರೆಯಾಗದೆ ಮರಳು ಪೂರೈಕೆಯಾಗಲಿ: ಕೋಟ ಶ್ರೀನಿವಾಸ ಪೂಜಾರಿ

By

Published : Dec 17, 2019, 9:19 AM IST

ಮಂಗಳೂರು:ಸಾರ್ವಜನಿಕರಿಗೆ ಯಾವ ರೀತಿಯ ತೊಂದರೆ ಇಲ್ಲದೆ ಸುಲಭ ರೀತಿಯಲ್ಲಿ ಮರಳು ಪೂರೈಕೆ ಆಗಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಸರ್ಕಾರದಿಂದ ನೀಡಬೇಕಾದ ಸೌಲಭ್ಯ ಒದಗಿಸಿ, ಸರ್ಕಾರಿ ಕಾಮಗಾರಿಗಳಿಗೆ ಸಕಾಲದಲ್ಲಿ ಮರಳು ಪೂರೈಕೆಯಾಗಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ತಿಗೊಳಿಸುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ 4.62 ಕೋಟಿ ರೂ. ಮೊತ್ತ ಲಭ್ಯವಿದ್ದು, ಇದನ್ನು ಗಣಿಗಾರಿಕೆಯಿಂದ ತೊಂದರೆಗೀಡಾದ ಪ್ರದೇಶಗಳ ಅಭಿವೃದ್ಧಿಗೆ ಬಳಸಲಾಗುವುದು. ಆಯಾ ಪ್ರದೇಶದ ಶಾಸಕರಿಂದ ಕ್ರಿಯಾ ಯೋಜನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಕಾಯ್ದಿರಿಸಿದ ಮರಳು ಎರಡು ಮೂರು ದಿನಗಳೊಳಗೆ ದೊರಕದೇ ಇದ್ದಲ್ಲಿ ಈ ಕುರಿತು ಸಾರ್ವಜನಿಕರು ದೂರು ನೀಡಬಹುದು. ಸಾರ್ವಜನಿಕರಿಗೆ ಸುಲಭ ರೀತಿಯಲ್ಲಿ ಯೋಜನೆಗಳು ಸಕ್ರಿಯವಾಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ABOUT THE AUTHOR

...view details