ಮಂಗಳೂರು: ತಮ್ಮ ತವರು ರಾಜ್ಯಕ್ಕೆ ಕಳಿಸಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಹೊರ ರಾಜ್ಯದ ವಲಸೆ ಕಾರ್ಮಿಕರು ನಗರದ ಮಿಲಾಗ್ರಿಸ್ ಕಾಲೇಜಿನ ಮುಂಭಾಗ ದಿಢೀರ್ ಮುಷ್ಕರ ಹೂಡಿದ ಘಟನೆ ಇಂದು ನಡೆದಿದೆ.
ತವರು ರಾಜ್ಯಕ್ಕೆ ಕಳಿಸಿ ಎಂದು ಮಂಗಳೂರಲ್ಲಿ ವಲಸೆ ಕಾರ್ಮಿಕರಿಂದ ದಿಢೀರ್ ಮುಷ್ಕರ - ಸುಮಾರು 400-500 ವಲಸೆ ಕಾರ್ಮಿಕರು ಸಾಮಾಜಿಕ ಅಂತರ
ತಮ್ಮನ್ನು ತವರು ರಾಜ್ಯಕ್ಕೆ ಕಳಿಸಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಹೊರ ರಾಜ್ಯದ ವಲಸೆ ಕಾರ್ಮಿಕರು ನಗರದ ಮಿಲಾಗ್ರಿಸ್ ಕಾಲೇಜಿನ ಮುಂಭಾಗ ಮುಷ್ಕರ ಹೂಡಿದ ಘಟನೆ ಇಂದು ನಡೆದಿದೆ.
ಊರಿಗೆ ಕಳಿಸಿ ಎಂದು ಮಂಗಳೂರಲ್ಲಿ ಮುಷ್ಕರ ಹೂಡಿದ ವಲಸೆ ಕಾರ್ಮಿಕರು...!
ಸುಮಾರು 400-500 ವಲಸೆ ಕಾರ್ಮಿಕರು ಸಾಮಾಜಿಕ ಅಂತರ ಮರೆತು ಒಂದೆಡೆ ಸೇರಿದ್ದರು. ಬಳಿಕ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಅವರು ಸ್ಥಳಕ್ಕೆ ಭೇಟಿ ನೀಡಿ ವಲಸೆ ಕಾರ್ಮಿಕರಿಗೆ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಎಲ್ಲರಿಗೂ ರೈಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಅಲ್ಲದೆ, ವಲಸೆ ಕಾರ್ಮಿಕರಿಗೆ ತವರು ರಾಜ್ಯಕ್ಕೆ ತೆರಳಲು ಶ್ರಮಿಕ್ ರೈಲು ವ್ಯವಸ್ಥೆ ಆಗುವವರೆಗೆ ಜಿಲ್ಲಾಡಳಿತ ಮಿಲಾಗ್ರಿಸ್ ಕಾಲೇಜಿನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ಹೇಳಿದೆ.
Last Updated : May 19, 2020, 7:46 PM IST