ಉಳ್ಳಾಲ(ದಕ್ಷಿಣಕನ್ನಡ): ಉಳ್ಳಾಲ ಸಮುದ್ರ ತೀರಕ್ಕೆ ಬೃಹತ್ ಅಲೆಗಳು ಅಪ್ಪಳಿಸುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಕೈಕೋ, ಕಿಲಿರಿಯಾನಗರ, ಮೊಗವೀರಪಟ್ನ, ಕೋಡಿ, ಕೋಟೆಪುರ, ಉಚ್ಚಿಲ, ಸೋಮೇಶ್ವರ ಸಮುದ್ರ ದಂಡೆಗೆ ಬೃಹತ್ ಅಲೆಗಳು ಅಪ್ಪಳಿಸುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಉಳ್ಳಾಲ ಭಾಗದಲ್ಲಿ ಬ್ರಮ್ಸ್ ಹಾಗೂ ತಾತ್ಕಾಲಿಕ ಕಲ್ಲುಗಳನ್ನ ಹಾಕಿರುವುದರಿಂದ ಪ್ರತಿವರ್ಷ ಹಾನಿಗೊಳಗಾಗುತ್ತಿರುವ ಮನೆಗಳು ಈ ಬಾರಿ ಸುರಕ್ಷಿತವಾಗಿವೆ. ಸೋಮೇಶ್ವರ ಮತ್ತು ಉಚ್ಚಿಲ ತೀರದಲ್ಲಿ ಹಲವು ಮನೆಗಳು ಅಪಾಯದಂಚಿಗೆ ತಲುಪಿದ್ದು, ತಾತ್ಕಾಲಿಕವಾಗಿ ಕಲ್ಲುಗಳನ್ನು ಹಾಕುವಂತೆ ಸ್ಥಳೀಯರ ಉತ್ತಾಯಿಸಿದ್ದಾರೆ. ಇನ್ನು, ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳದೆ ದೋಣಿಗಳನ್ನು ಮೇಲಕ್ಕೆತ್ತಿ ನಿಲ್ಲಿಸಿದ್ದಾರೆ.
ಇನ್ನು, ಇಂದು ಸುರಿದ ಭಾರೀ ಮಳೆಗೆ ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್ ಸಂಪೂರ್ಣ ಜಲಾವೃತಗೊಂಡು, ವಾಹನ ಸವಾರರು ಪರದಾಡಿದರು. ತೊಕ್ಕೊಟ್ಟು ಜಂಕ್ಷನ್‍ನ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಮೊಣಕಾಲುದ್ದ ನೀರು ಜಮಾವಣೆಗೊಂಡು ರಸ್ತೆಯಲ್ಲಿ ಸಣ್ಣ ವಾಹನಗಳು ಚಲಿಸಲು ಅಡಚಣೆಯುಂಟಾಯಿತು.