ಮಂಗಳೂರು: ಪಕ್ಷಿಕೆರೆಯಲ್ಲಿರುವ ಬದ್ರಿಯಾ ಮಸೀದಿಗೆ ಹಿಂದೂ ಕಲಾವಿದರೊಬ್ಬರು ಆಕರ್ಷಕವಾದ ಕಾಷ್ಠಶಿಲ್ಪ ನಿರ್ಮಿಸಿದ್ದಾರೆ. ಬದ್ರಿಯಾ ಜುಮ್ಮಾ ಮಸೀದಿಯ ಒಳಾಂಗಣ ವಿನ್ಯಾಸ ಕಾರ್ಯ ಇತ್ತೀಚೆಗೆ ನಡೆದಿದ್ದು, ಸುಮಾರು 1 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಮರದ ಶಿಲ್ಪ ರಚಿಸಲಾಗಿದೆ. ಹಿಂದೂ ಶಿಲ್ಪಿಯೊಬ್ಬರು ಈ ಮಸೀದಿಯ ಒಳಭಾಗದ ಕೆತ್ತನೆ ಮಾಡಿರುವುದು ಗಮನಸೆಳೆಯುತ್ತಿದೆ.
ಉಡುಪಿ ಜಿಲ್ಲೆಯ ಕಾಪುವಿನ ಹರೀಶ್ ಆಚಾರ್ಯ ಎಂಬವರು ಮಸೀದಿಯ ಮರದ ಕೆತ್ತನೆ ಮಾಡಿದ್ದಾರೆ. ಕಾಪು ಬಳಿಯ ಮಜೂರು ಎಂಬಲ್ಲಿನ ಮಸೀದಿಗೂ ಇವರದ್ದೇ ಮರದ ಕೆತ್ತನೆ. ಅಲ್ಲದೇ 25 ದೇವಸ್ಥಾನಗಳಲ್ಲಿ ಮರದ ಕೆತ್ತನೆಯನ್ನು ಮಾಡಿದ ಅನುಭವ ಇವರಿಗಿದೆ.