ಮಂಗಳೂರು: ಹಿಜಾಬ್ ವಿವಾದದ ಹಿಂದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಬೇಕೆಂಬ ಟೂಲ್ ಕಿಟ್ನ ಸಂಚು ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಫ್ತಿ ಮಹಮ್ಮದ್ ಟ್ವೀಟ್ ಮಾಡುತ್ತಾರೆಂದರೆ ಈ ವಿವಾದದ ಹಿಂದೆ ಹಿಡನ್ ಅಜೆಂಡಾ ಅಡಗಿದೆ ಎಂದು ಇಂಧನ ಹಾಗೂ ಜನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಸಂಶಯ ವ್ಯಕ್ತಪಡಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಶಾಲೆಗೆ ಶುಲ್ಕ ಕಟ್ಟಲು ದುಡ್ಡಿಲ್ಲದ ಸಮುದಾಯದವರಿಗೆ ಕೋರ್ಟ್ಗೆ ಹೋಗಲು ಎಲ್ಲಿಂದ ದುಡ್ಡು ಬರುತ್ತದೆ. ಇದಕ್ಕೆ 50 ರಿಂದ 60 ಸಾವಿರ ಮಂದಿ ಟ್ವೀಟ್ ಮಾಡುತ್ತಾರೆಂದರೆ ಇದರ ಹಿಂದೆ ಯಾರಿದ್ದಾರೆಂಬುದು ಸ್ಪಷ್ಟವಾಗಿದೆ ಎಂದರು.
ದ.ಕ.ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಡತ ವಿಲೇವಾರಿಯಾಗದೆ ಅಧಿಕಾರಿಗಳ ಟೇಬಲ್ನಲ್ಲಿಯೇ ಬಾಕಿ ಉಳಿದಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಫೆ.19 ರಿಂದ 28 ರವರೆಗೆ ಕಡತ ವಿಲೇವಾರಿ ಆಗದೆ ಅಭಿಯಾನವನ್ನು ನಡೆಸಲಾಗುತ್ತದೆ. ಈ ಅಭಿಯಾನ ಗ್ರಾಪಂನಿಂದ ಹಿಡಿದು ಜಿಲ್ಲಾಮಟ್ಟದ ಕಚೇರಿವರೆಗೆ ನಡೆಯಲಿದೆ. ಆದ್ದರಿಂದ ಮುಂದೆ ಕಡತ ವಿಲೇಯಾಗದೆ ಯಾವ ಅಧಿಕಾರಿಯೂ ತನ್ನಲ್ಲಿ ಕಡತ ಇರಿಸಿಕೊಳ್ಳದಂತೆ ಕ್ರಮ ವಹಿಸಲಾಗುತ್ತದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.