ಮಂಗಳೂರು:ನಟ ದಿವಂಗತ ಪುನೀತ್ ರಾಜ್ಕುಮಾರ್ ಟೈಟಲ್ ಸಾಂಗ್ ಹಾಡಿದ್ದ ಶಿರ್ಡಿ ಸಾಯಿ ಬಾಲಾಜಿ ಬ್ಯಾನರ್ನಲ್ಲಿ ನಿರ್ಮಾಣವಾದ 'ಹರೀಶ ವಯಸ್ಸು 36' ಚಿತ್ರವು ಮಾ.11ರಂದು ಬಿಡುಗಡೆಯಾಗಲಿದೆ.
ಗುರುರಾಜ್ ಜ್ಯೇಷ್ಠ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಹರೀಶ ವಯಸ್ಸು 36' ಸಿನಿಮಾದಲ್ಲಿ ನಾಲ್ಕು ಹಾಡುಗಳಿದೆ. ಇದರಲ್ಲಿ 'ಹರೀಶಣ್ಣಂಗೆ ವಯಸ್ಸು 36' ಎಂಬ ಟೈಟಲ್ ಸಾಂಗನ್ನು ಪುನೀತ್ ರಾಜ್ಕುಮಾರ್ ಹಾಡಿದ್ದಾರೆ.
ಈ ಸಿನಿಮಾವು ಮಂಗಳೂರು ಕನ್ನಡದ ಸಂಭಾಷಣೆ ಹೊಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಮತ್ತು ಮಂಗಳೂರು ನಗರದಲ್ಲಿ ಚಿತ್ರೀಕರಣಗೊಂಡಿದೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾದಲ್ಲಿ ಜೋಸೆಫ್ ಮಾಸ್ಟರ್ ಪಾತ್ರ ಮಾಡಿದ್ದ ಯೋಗೀಶ್ ಶೆಟ್ಟಿ ಈ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಶ್ವೇತಾ ಅರೆಹೊಳೆ ನಾಯಕಿಯಾಗಿ ನಟಿಸಿದ್ದಾರೆ.
ಪುನೀತ್ ಟೈಟಲ್ ಸಾಂಗ್ ಹಾಡಿದ 'ಹರೀಶ ವಯಸ್ಸು 36' ಚಿತ್ರ ನಾಡಿದ್ದು ತೆರೆಗೆ ವಯಸ್ಸು 36 ಆಗಿರುವ ಹರೀಶ ಮದುವೆಗೆ ಹುಡುಗಿಯ ಅನ್ವೇಷಣೆಯಲ್ಲಿ ಇರುವ ಸಂದರ್ಭದಲ್ಲಿ ನಡೆಯುವ ಘಟನೆಗಳ ಕಥೆ ಹೊಂದಿರುವ ಈ ಸಿನಿಮಾ ಹಾಸ್ಯಪ್ರಧಾನ ಚಿತ್ರವಾಗಿದೆ.
ಇದನ್ನೂ ಓದಿ:ರಶ್ಮಿಕಾ ಅಭಿನಯದ ಚೊಚ್ಚಲ ಹಿಂದಿ ಸಿನೆಮಾ 'ಮಿಷನ್ ಮಜ್ನು' ರಿಲೀಸ್ಗೆ ಮುಹೂರ್ತ ಫಿಕ್ಸ್