ಕರ್ನಾಟಕ

karnataka

ETV Bharat / city

ಮದುವೆ ನಿಶ್ಚಿಯವಾದ ಯುವತಿಗೆ ಕಿರುಕುಳ ಆರೋಪ : ವಿಟ್ಲ ಠಾಣೆಯಲ್ಲಿ ದೂರು ದಾಖಲು

ಯುವತಿ ಹಾಗೂ ಆಕೆಯ ತಂಗಿಯ ಮೊಬೈಲ್​ಗೆ ಕರೆ ಮಾಡಿ, ಹಳೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಹೆದರಿಸಿದ್ದಾನೆ ಹಾಗೂ ಮದುವೆಯಾಗುವ ಹುಡುಗನ ಮನೆಯವರಿಗೆ ಕರೆ ಮಾಡಿ ಮದುವೆ ನಿಲ್ಲಿಸಿದ್ದಾನೆ..

harassment-for-a-young-woman-who-is-determined-to-marry
ಕಿರುಕುಳ ಆರೋಪ

By

Published : Jul 17, 2021, 8:56 PM IST

ಬಂಟ್ವಾಳ :ನಿಗದಿಯಾಗಿದ್ದ ಮದುವೆ ನಿಲ್ಲಿಸಿ, ಹಳೆಯ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಯುವಕನೊಬ್ಬ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಆರೋಪಿಸಿ ಯುವತಿಯೋರ್ವಳು ವಿಟ್ಲ ಪೊಲೀಸ್‌ ಠಾಣೆ ಮೊರೆ ಹೋಗಿದ್ದಾರೆ.

ತಾಲೂಕಿನ 21 ವರ್ಷದ ಯುವತಿಗೆ ಇರ್ಫಾನ್ ಎಂಬಾತ ಮೂರು ವರ್ಷಗಳಿಂದ ಪರಿಚಯಸ್ಥನಾಗಿದ್ದ. ಯುವತಿಯ ಮದುವೆ ನಿಶ್ಚಯವಾದ ಹಿನ್ನೆಲೆ ಯುವಕ, ಯುವತಿಯ ಮನೆಗೆ ಬಂದು ಜಗಳ ಮಾಡಿಕೊಂಡು ದೂರವಾಗಿದ್ದ ಎನ್ನಲಾಗಿದೆ.

ನಂತರ ಯುವತಿ ಹಾಗೂ ಆಕೆಯ ತಂಗಿಯ ಮೊಬೈಲ್​ಗೆ ಕರೆ ಮಾಡಿ, ಹಳೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಹೆದರಿಸಿದ್ದಾನೆ ಹಾಗೂ ಮದುವೆಯಾಗುವ ಹುಡುಗನ ಮನೆಯವರಿಗೆ ಕರೆ ಮಾಡಿ ಮದುವೆ ನಿಲ್ಲಿಸಿದ್ದಾನೆ ಎಂದು ವಿಟ್ಲ ಠಾಣೆಯಲ್ಲಿ ನೊಂದ ಯುವತಿ ದೂರು ಸಲ್ಲಿಸಿದ್ದಾರೆ.

ABOUT THE AUTHOR

...view details