ಕರ್ನಾಟಕ

karnataka

ETV Bharat / city

ವಲಸೆ ಕಾರ್ಮಿಕರಿಗೆ ಊಟ, ವಸತಿ ನೀಡಿ ಮಾನವೀಯತೆ ಮೆರೆದ ಗ್ರಾಪಂ ಸದಸ್ಯ - Gram Panchayat Member abubukar

ಮಂಗಳೂರು ಹೊರವಲಯದ ಜೋಕಟ್ಟೆಯಲ್ಲಿ ಆಹಾರವಿಲ್ಲದೆ ಬೀಡು ಬಿಟ್ಟಿದ್ದ ವಲಸೆ ಕಾರ್ಮಿಕರಿಗೆ ಗ್ರಾಪಂ ಸದಸ್ಯ ಅಬೂಬಕ್ಕರ್ ಬಾವಾ ಊಟ, ವಸತಿ ನೀಡಿ ನೆರವಾಗಿದ್ದಾರೆ.

Gram Panchayat Member provide food  to migrant workers
ವಲಸೆ ಕಾರ್ಮಿಕರಿಗೆ ಊಟ,ವಸತಿ ನೀಡಿ ಮಾನವೀಯತೆ ಮೆರೆದ ಗ್ರಾ.ಪಂ ಸದಸ್ಯ

By

Published : May 15, 2020, 3:01 PM IST

ಮಂಗಳೂರು:ನಗರದ ಹೊರವಲಯದ ಜೋಕಟ್ಟೆಯಲ್ಲಿ ಆಹಾರವಿಲ್ಲದೆ ಬೀಡು ಬಿಟ್ಟಿದ್ದ ವಲಸೆ ಕಾರ್ಮಿಕರಿಗೆ ಗ್ರಾಪಂ ಸದಸ್ಯ ಅಬೂಬಕ್ಕರ್ ಬಾವಾ ಊಟ, ವಸತಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ವಲಸೆ ಕಾರ್ಮಿಕರಿಗೆ ಊಟ, ವಸತಿ ನೀಡಿ ಮಾನವೀಯತೆ ಮೆರೆದ ಗ್ರಾಪಂ ಸದಸ್ಯ

ಜಿಲ್ಲಾಡಳಿತ ಹೊರ ರಾಜ್ಯದ ಕಾರ್ಮಿಕರಿಗೆ ತವರಿಗೆ ತೆರಳಲು ರೈಲಿನ ವ್ಯವಸ್ಥೆ ಮಾಡಿದ್ದು, ಜೋಕಟ್ಟೆಯಲ್ಲಿಯೂ ಪೊಲೀಸ್ ಪಿಕ್​ಅಪ್ ಪಾಯಿಂಟ್ ಮಾಡಲಾಗಿತ್ತು. ಹೀಗಾಗಿ ಇಲ್ಲಿ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮೂಲದ ಸುಮಾರು 250ಕ್ಕೂ ಅಧಿಕ ವಲಸೆ ಕಾರ್ಮಿಕರು ಜಮಾಯಿಸಿದ್ದರು. ಆದರೆ ಇವರೆಲ್ಲರೂ ಹೊಟ್ಟೆಗೆ ಹಿಟ್ಟು, ವಸತಿ ಇಲ್ಲದೆ ಪರದಾಡುತ್ತಿದ್ದು, ಇದನ್ನ ಕಂಡ ಅಬೂಬಕ್ಕರ್ ಬಾವಾ ಕಳೆದ ಭಾನುವಾರದಿಂದ ಊಟ, ವಸತಿ ನೀಡುತ್ತಿದ್ದಾರೆ.

ಅಲ್ಲದೆ, ನಿನ್ನೆ ತಮ್ಮ ತವರು ಜಿಲ್ಲೆಗೆ ಪ್ರಯಾಣ ಮಾಡಿದ 14 ಮಂದಿ ವಲಸೆ ಕಾರ್ಮಿಕರಿಗೆ ರೈಲು ವೆಚ್ಚ ಭರಿಸಲು 15 ಸಾವಿರ ರೂ. ಹಾಗೂ ಊಟ ನೀಡಿ ಕಳುಹಿಸಿದ್ದಾರೆ.

ABOUT THE AUTHOR

...view details