ಮಂಗಳೂರು :ಇಷ್ಟು ಸಮಯಗಳ ಕಾಲ ಕೋವಿಡ್ ಸೋಂಕಿನಿಂದ ತೊಂದರೆಗಳಾದರೂ ನಾವು ಲೆಕ್ಕಿಸಲಿಲ್ಲ. ಅದೇ ರೀತಿ ಈ ಬಾರಿ ಕೂಡ ಭಕ್ತಾದಿಗಳು ಕೋವಿಡ್ಗೆ ಹೆದರದೆ ಎಲ್ಲರೂ ಒಂದಾಗಿ ಎದುರಿಸಬೇಕು ಎಂದು ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಪೂಜಾರಿ ಹೇಳಿದರು.
ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಮಂಗಳೂರು ದಸರಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವರೂ ಸರ್ಕಾರ ಹೇಳಿರುವ ಕೋವಿಡ್ ನಿಯಮ ಪಾಲಿಸಬೇಕು. ಜನರಿಗೆ ತೊಂದರೆಯಾಗದ ರೀತಿ ಎಲ್ಲಾ ಭಕ್ತರು ನಿಯಮಗಳನ್ನು ಪಾಲಿಸಿಕೊಂಡು ಈವರೆಗೆ ಬಂದಿದ್ದಾರೆ. ಅದೇ ರೀತಿ ಇನ್ನೂ ಕೂಡ ಕೋವಿಡ್ ನಿಯಮ ಪಾಲಿಸಿ ದಸರಾ ಕಾರ್ಯಕ್ರಮವನ್ನು ನೆರವೇರಿಸಿ ಕೊಡಬೇಕು ಎಂದು ತಿಳಿಸಿದರು.