ಮಂಗಳೂರು (ದಕ್ಷಿಣ ಕನ್ನಡ):ಎರಡು ಗಾಂಜಾ ಸಾಗಾಟ ಪ್ರಕರಣಗಳನ್ನು ಮಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿದ್ದು, ಐವರನ್ನು ಬಂಧಿಸಿದ್ದಾರೆ.
ಪ್ರಕರಣ-1: ಕೇರಳದಿಂದ ಮಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದವರನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೇರಳ ರಾಜ್ಯದ ಮಂಜೇಶ್ವರದ ಪ್ರಫುಲ್ ರಾಜ್ (23) ಮತ್ತು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪದ ಅವಿನಾಶ್ (24) ಬಂಧಿತರು.
ಇದನ್ನೂ ಓದಿ:ಕಸ ಹಾಕುವ ವಿಚಾರಕ್ಕೆ ಕುಟುಂಬಸ್ಥರ ನಡುವೆ ಮಾರಾಮಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಆರೋಪಿಗಳು ಕೇರಳದ ಗಡಿ ಭಾಗವಾದ ಕುಂಜತ್ತೂರಿನಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಮಂಗಳೂರಿನ ತಲಪಾಡಿಯ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. 2 ಕೆಜಿ ಗಾಂಜಾ ಜೊತೆಗೆ ಕಾರು, ಮೊಬೈಲ್ ಫೋನ್ ಹಾಗು 1,200 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ-2: ಮಂಗಳೂರಿನ ಮಂಜನಾಡಿ ಗ್ರಾಮದಲ್ಲಿ ಗಾಂಜಾ ಸಾಗಿಸುತ್ತಿದ್ದವರನ್ನು ಕೋಣಾಜೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ವರ್ಕಾಡಿಯ ಮುಹಮ್ಮದ್ ಹನೀಫ್, ಮೀಯಪದವಿನ ಮಾಮದ್ ನಸೀಬು ಮತ್ತು ಮಂಗಳೂರು ಕೆ.ಸಿ.ರೋಡ್ನ ಹಬೀಬ್ ಎಂಬುವರನ್ನು ಬಂಧಿಸಲಾಗಿದೆ. ಇವರಿಂದ 1 ಕೆಜಿ 340 ಗ್ರಾಂ ಗಾಂಜಾ, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.