ಕಡಬ(ದಕ್ಷಿಣ ಕನ್ನಡ): ನಗರದ ಕೋಡಿಂಬಾಳದ ಚಿಕನ್ ಸೆಂಟರ್ವೊಂದರಲ್ಲಿ ಜೆರಾಕ್ಸ್ ಮಾಡಿದ 100 ರೂ. ನೋಟ್ ಒಂದು ಚಿಕ್ಕನ್ ಖರೀದಿಸಲು ಬಂದ ಗ್ರಾಹಕರಿಗೆ ಸಿಕ್ಕಿದ್ದು, ಗ್ರಾಹಕರು ಮತ್ತು ವರ್ತಕರು ಎಚ್ಚರ ವಹಿಸಬೇಕಿದೆ.
ಗ್ರಾಹಕರೇ ಎಚ್ಚರ..! ಕಡಬದಲ್ಲಿ ಓಡಾಡುತ್ತಿದೆ 100 ರೂ. ಜೆರಾಕ್ಸ್ ನೋಟು
ಕಡಬ ತಾಲೂಕಿನ ಕೋಡಿಂಬಾಳದ ಅಶ್ರಫ್ ಎಂಬವರ ಚಿಕನ್ ಸೆಂಟರ್ನಿಂದ ಅಸಲಿ ನೋಟನ್ನು ಹೋಲುವ ನೂರು ರೂಪಾಯಿಯ ಜೆರಾಕ್ಸ್ ನೋಟ್ ಒಂದು ಚಿಕ್ಕನ್ ಖರೀದಿಗೆ ಬಂದ ಗ್ರಾಹಕರೊಬ್ಬರಿಗೆ ದೊರೆತಿದೆ.
ಕಡಬ ತಾಲೂಕಿನ ಕೋಡಿಂಬಾಳದ ಅಶ್ರಫ್ ಎಂಬವರ ಚಿಕನ್ ಸೆಂಟರ್ನಿಂದ ಅಸಲಿ ನೋಟನ್ನು ಹೋಲುವ ನೂರು ರೂ. ಜೆರಾಕ್ಸ್ ನೋಟ್ ಚಿಕನ್ ಖರೀದಿಗೆ ಬಂದ ಗ್ರಾಹಕರೊಬ್ಬರಿಗೆ ದೊರೆತಿದೆ. ಅವರು ಅದನ್ನು ಆಟೋ ಚಾಲಕ ರಾಜೇಶ್ ಎಂಬವರಿಗೆ ನೀಡಿದ್ದಾರೆ. ಈ ನೋಟು ಗಮನಿಸಿದ ಆಟೋ ಚಾಲಕ ರಾಜೇಶ್ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಡಬ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿ ಚಿಕನ್ ಅಂಗಡಿಗೆ ಬಂದು ಪರಿಶೀಲನೆ ನಡೆಸಿದರು. ಚಿಕನ್ ಖರೀದಿಗೆ ಬಂದ ಯಾರೋ ತನಗೆ ಈ ನೋಟ್ ನೀಡಿದ್ದಾರೆ. ಅದನ್ನು ಗಮನಿಸದೆ ಇನ್ನೊರ್ವರಿಗೆ ಚಲಾವಣೆ ಮಾಡಿದ್ದಾಗಿ ಚಿಕನ್ ಅಂಗಡಿ ಮಾಲೀಕ ಅಶ್ರಫ್ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಸಾರ್ವಜನಿಕರು ಇಂತಹ ನೋಟ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.