ಮಂಗಳೂರು(ದಕ್ಷಿಣ ಕನ್ನಡ): ಪಠ್ಯದಲ್ಲಿ ಬದಲಾವಣೆಯನ್ನು ವಿರೋಧಿಸುವವರು ರಾಷ್ಟ್ರದ್ರೋಹಿಗಳು ಎಂಬ ಕಟೀಲ್ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕುತ್ತೇವೆ ಎನ್ನುವವರು ರಾಷ್ಟ್ರಪ್ರೇಮಿಗಳು ಎಂದು ವ್ಯಂಗ್ಯವಾಡಿದರು.
ಜಿಲ್ಲೆಯ ಕೆಲ ಶಾಲೆಗಳಲ್ಲಿ ಶಾಲಾರಂಭದ ದಿನ ಹೋಮ-ಹವನ ಮಾಡಿರುವ ಬಗ್ಗೆ ಮಾತನಾಡಿ, ಶಾಲೆಗಳಲ್ಲಿ ಮೊದಲಿನಿಂದ ಯಾವೆಲ್ಲ ಪದ್ಧತಿ ಇದೆಯೋ, ಎಲ್ಲಾ ಧರ್ಮದವರಿಗೆ ಏನು ಗೌರವ ಕೊಡಬೇಕೋ ಅದನ್ನು ಮಾಡಬೇಕು ಎಂದರು. ವಿದ್ಯಾವಂತರು ದೇಶದ ಆಸ್ತಿ. ದ.ಕ ಜಿಲ್ಲೆಯಿಂದ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವುದನ್ನು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.