ಕರ್ನಾಟಕ

karnataka

ETV Bharat / city

ಮಂಗಳೂರಿನಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಮತ್ತಿಬ್ಬರು ಬಲಿ

ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಶಂಕಿತ ಡೆಂಗ್ಯೂ ಜ್ವರಕ್ಕೆ ಮತ್ತಿಬ್ಬರು ಬಲಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಶಂಕಿತ ಡೆಂಗ್ಯೂ ಜ್ವರಕ್ಕೆ ಮತ್ತಿಬ್ಬರು ಬಲಿ

By

Published : Aug 28, 2019, 7:55 PM IST

ಮಂಗಳೂರು: ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಶಂಕಿತ ಡೆಂಗ್ಯೂ ಜ್ವರಕ್ಕೆ ಮತ್ತಿಬ್ಬರು ಬಲಿಯಾದ ಘಟನೆ ನಡೆದಿದೆ.

ತೊಕ್ಕೊಟ್ಟು ಕುಂಪಲ ನಿವಾಸಿ ಪ್ರಕಾಶ್ ಗಟ್ಟಿ (41) ಹಾಗೂ ತೊಕ್ಕೊಟ್ಟು ಚೊಂಬುಗುಡ್ಡೆ ನಿವಾಸಿ ಸುಮತಿ (36) ಮೃತಪಟ್ಟವರು.

ಪ್ರಕಾಶ್ ಟೆಂಪೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಸುಮತಿಯವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾಗಿದ್ದರು. ಇಬ್ಬರಿಗೂ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದರೂ, ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ABOUT THE AUTHOR

...view details