ಕರ್ನಾಟಕ

karnataka

ETV Bharat / city

ಅಥ್ಲೀಟ್​ ಜಿತಿನ್ ಪೌಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರೀಡಾಪಟು ಪೂವಮ್ಮ

ಏಷ್ಯನ್ ಗೇಮ್ಸ್​​ನಲ್ಲಿ ಸ್ವರ್ಣ ಪದಕ ವಿಜೇತೆಯಾಗಿರುವ ಪೂವಮ್ಮ ಅವರು ಇಂದು ಕೇರಳದ ಅಥ್ಲೀಟ್​ ಜಿತಿನ್ ಪೌಲ್ ಜೊತೆ ವಿವಾಹವಾದರು.

athlete poovamma married a jithin poul
ಜಿತಿನ್ ಪೌಲ್ - ಪೂವಮ್ಮ ವಿವಾಹ

By

Published : Dec 29, 2021, 4:03 PM IST

ಮಂಗಳೂರು: ಖ್ಯಾತ ಅಥ್ಲೀಟ್​ ಪೂವಮ್ಮ ಅವರು ಇಂದು ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಏಷ್ಯನ್ ಗೇಮ್ಸ್​​ನಲ್ಲಿ ಸ್ವರ್ಣ ಪದಕ ವಿಜೇತೆಯಾಗಿರುವ ಪೂವಮ್ಮ ಇಂದು ಕೇರಳದ ಅಥ್ಲೀಟ್​ ಜಿತಿನ್ ಪೌಲ್ ಜೊತೆ ನವ ಜೀವನಕ್ಕೆ ಕಾಲಿಟ್ಟರು.

ಮಂಗಳೂರು ನಗರದ ಹೊರವಲಯದಲ್ಲಿರುವ ಅಡ್ಯಾರ್ ಗಾರ್ಡನ್​ನ ವಿ.ಕೆ ಶೆಟ್ಟಿ ಅಡಿಟೋರಿಯಂನಲ್ಲಿ ಈ ವಿವಾಹ ಸಮಾರಂಭ ನಡೆಯಿತು. ಕೊಡವ ಸಂಪ್ರದಾಯದಂತೆ ಈ ಮದುವೆ ನಡೆದಿದ್ದು, ವಧುವರರ ತಂದೆ - ತಾಯಿ, ಕುಟುಂಬವರ್ಗ ಮತ್ತು ಬಂಧುಮಿತ್ರರು ಪಾಲ್ಗೊಂಡಿದ್ದರು‌. ಜ. 1ರಂದು ಕೇರಳದ ತ್ರಿಶೂರಿನಲ್ಲಿ ವಿವಾಹ ಪ್ರಯುಕ್ತ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ:ಪವರ್ ಸ್ಟಾರ್ ನಮ್ಮನ್ನಗಲಿ ಇಂದಿಗೆ 2 ತಿಂಗಳು.. ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

ABOUT THE AUTHOR

...view details