ಕರ್ನಾಟಕ

karnataka

ETV Bharat / city

ದಕ್ಷಿಣ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ EE ಮನೆ ಮೇಲೆ ಎಸಿಬಿ Raid - ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ ಶ್ರೀಧರ್

ದಕ್ಷಿಣಕನ್ನಡ ಜಿಲ್ಲೆಯ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ ಶ್ರೀಧರ್ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Mangalore
ದಕ್ಷಿಣಕನ್ನಡ ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಇಇ ಮನೆ ಮೇಲೆ ಎಸಿಬಿ ದಾಳಿ

By

Published : Jul 15, 2021, 9:40 AM IST

ಮಂಗಳೂರು:ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಮೇರೆಗೆ ದಕ್ಷಿಣಕನ್ನಡ ಜಿಲ್ಲೆಯ ನಗರಾಭಿವೃದ್ಧಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ ಶ್ರೀಧರ್ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು ನಗರದಲ್ಲಿರುವ ಶ್ರೀಧರ್ ಅವರ ನಿವಾಸ ಮತ್ತು ಕಚೇರಿ ಮೇಲೆ ಎಸಿಬಿ ದಾಳಿ ನಡೆಸಲಾಗಿದೆ. ಜೊತೆಗೆ ಶ್ರೀಧರ್ ಅವರ ಮೈಸೂರಿನಲ್ಲಿರುವ ಮನೆ ಮೇಲೂ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಮೇರೆಗೆ ರಾಜ್ಯದ 9 ಕಡೆ ವಿವಿಧ ಇಲಾಖೆಯ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಲಾಗಿದ್ದು, ಮಂಗಳೂರಿನಲ್ಲಿ ಶ್ರೀಧರ್ ಅವರ ಮನೆಯಲ್ಲಿ ಶೋಧಕಾರ್ಯ ಮುಂದುವರಿದಿದೆ.

ಇದನ್ನೂ ಓದಿ:ಮನೆಯಲ್ಲಿ 7 ಜನ ವೈದ್ಯರಿದ್ದರೂ ಕಾಗೋಡು ತಿಮ್ಮಪ್ಪಗೆ ಯಾಕೆ ಲಸಿಕೆ ಸಿಕ್ಕಿಲ್ಲ ಗೊತ್ತಿಲ್ಲ: ಶಾಸಕ ಹಾಲಪ್ಪ

ABOUT THE AUTHOR

...view details