ಕಲಬುರಗಿ:ಸದಾಶಿವ ಆಯೋಗ ವರದಿ ಜಾರಿಗಾಗಿ ಮನವಿ ಸಲ್ಲಿಸಲು ತೆರಳಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಕಲಬುರಗಿಯಲ್ಲಿ ಪೊಲೀಸರು-ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ - ಮಾತಿನ ಚಕಮಕಿ
ಕಲಬುರಗಿಯಲ್ಲಿ ಪೊಲೀಸರು ಮತ್ತು ಸದಾಶಿವ ಆಯೋಗ ವರದಿ ಜಾರಿಗಾಗಿ ಮನವಿ ಸಲ್ಲಿಸಲು ತೆರಳಿದ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ
ನಗರದ ಐವಾನ್ ಶಾಹಿ ಅಥಿತಿ ಗೃಹದಲ್ಲಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲು ವಿವಿಧ ಸಂಘಟನೆಯ ಕಾರ್ಯಕರ್ತರು ಬಂದಿದ್ದರು. ಆ ವೇಳೆ ಸಿಎಂ ಮನವಿ ಪತ್ರ ಸ್ವೀಕರಿಸಿಲ್ಲವೆಂದು ಘೋಷಣೆ ಕೂಗಿ ಪ್ರತಿಭಟನೆಗೆ ಮುಂದಾದರು. ತಕ್ಷಣ ಐವಾನ್ ಶಾಹಿಯಿಂದ ಪ್ರತಿಭಟನಾಕಾರರನ್ನು ಹೊರಗೆ ಕರೆತಂದಿದ್ದಕ್ಕೆ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕಡೆಗೂ ಸಿಎಂ ಮನವಿ ಸ್ವೀಕರಿಸದೆ ಸ್ಥಳದಿಂದ ತೆರಳಿದರು.