ಕರ್ನಾಟಕ

karnataka

ETV Bharat / city

ಇನ್ಮುಂದೆ ಸಿಂಪಲ್​ ಮದುವೆಗೆ ಮಾತ್ರ ಅನುಮತಿ, ಸಡಗರಕ್ಕಿಲ್ಲ ಅವಕಾಶ: ಡಿಸಿಎಂ ಸೂಚನೆ - ‘ಕೊರೊನಾ ಸೋಂಕಿನ ಪ್ರಮಾಣ

ದಿನೇ ದಿನೆ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಮಿತಿ ಮೀರುತ್ತಿರುವ ಹಿನ್ನೆಲೆ, ಮುಂದಿನ ದಿನಗಳಲ್ಲಿ ಸಡಗರದ ಮದುವೆಗೆ ಅವಕಾಶ ನೀಡದಂತೆ, ಜನರು ಒಂದೆಡೆ ಸೇರದಂತೆ ಎಚ್ಚರ ವಹಿಸಬೇಕು ಎಂದು ಕಲಬುರಗಿ ಜಿಲ್ಲಾಡಳಿತಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.

DCM
ಡಿಸಿಎಂ ಕಾರಜೋಳ ಸೂಚನೆ

By

Published : Jul 6, 2020, 2:15 PM IST

ಕಲಬುರಗಿ: ಜಿಲ್ಲೆಯಲ್ಲಿ ಇನ್ನು ಮುಂದೆ ಮದುವೆ ಸಮಾರಂಭ ಮಾಡುವಂತಿಲ್ಲ, ತಾತ್ಕಾಲಿಕವಾಗಿ ಮದುವೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚಿಸಿದ್ದಾರೆ.

ಡಿಸಿಎಂ ಕಾರಜೋಳ ಸೂಚನೆ

ಮದುವೆ ಸಮಾರಂಭದಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಸರ್ಕಾರದ ಆದೇಶ ಇದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದಡೆ ಸೇರುತ್ತಿರುವುದರಿಂದ ಕೊರೊನಾ ನಿಯಂತ್ರಣ ಕಠಿಣವಾಗುತ್ತಿದೆ. ಈ ನಿಟ್ಟಿನಲ್ಲಿ ಮದುವೆ ಸಮಾರಂಭಕ್ಕೆ ಸದ್ಯಕ್ಕೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗಳಿಗೆ ಕಾರಜೋಳ ಸೂಚನೆ ನೀಡಿದ್ದಾರೆ‌.

ಮುಂದಿನ ದಿನಗಳಲ್ಲಿ ಜನರನ್ನು ಸೇರಿಸದೇ, ಅತಿ ಸರಳವಾಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಮಾಡಿಕೊಳ್ಳಲು ಮಾತ್ರ ಅನುಮತಿ ದೊರೆಯಲಿದೆ.

ABOUT THE AUTHOR

...view details