ಕರ್ನಾಟಕ

karnataka

ETV Bharat / city

50 ಜನ ವಿಚಾರವಾದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕಲಬುರಗಿಯಲ್ಲಿ ತೀವ್ರ ಖಂಡನೆ..

50 ಜನ ವಿಚಾರವಾದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕಲಬುರಗಿಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಗೋಹತ್ಯೆ ನೆಪದಲ್ಲಿ ನರ ಹತ್ಯೆ, ಗುಂಪು ಹತ್ಯೆ, ನೈತಿಕ ಪೊಲೀಸ್ ಗಿರಿ ನಿಲ್ಲಿಸುವಂತೆ 50 ಜನ ಸಾಹಿತಿಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ವಿಚಾರವಾದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕಲಬುರಗಿಯಲ್ಲಿ ಖಂಡನೆ

By

Published : Oct 6, 2019, 6:52 PM IST

ಕಲಬುರಗಿ: ಐವತ್ತು ಜನ ವಿಚಾರವಾದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕಲಬುರಗಿಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಗೋಹತ್ಯೆ ನೇಪದಲ್ಲಿ ನರ ಹತ್ಯೆ, ಗುಂಪು ಹತ್ಯೆ, ನೈತಿಕ ಪೊಲೀಸ್ ಗಿರಿ ನಿಲ್ಲಿಸುವಂತೆ 50 ಜನ ಸಾಹಿತಿಗಳು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ವಿಚಾರವಾದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕಲಬುರಗಿಯಲ್ಲಿ ಖಂಡನೆ

ಸಂವಿಧಾನಕ್ಕೆ ತಕ್ಕಂತೆ ಕೆಲಸ ಮಾಡಲು ಬುದ್ಧಿಜೀವಿಗಳು ಆಗ್ರಹಿಸಿದ್ದಾರೆ. ಆದರೆ, ಇದಕ್ಕೆ ಪ್ರಧಾನಿ ಮೋದಿಯವರು ಸಾಹಿತಿ, ಬುದ್ಧಿಜೀವಿಗಳ ವಿರುದ್ಧವೇ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆಂದು ಕಲಬುರಗಿ ಟೌನ್ ಹಾಲ್ ಬಳಿ ಪ್ರತಿಭಟಿಸಿ ಸಾಹಿತಿಗಳು, ವಿಚಾರವಾದಿಗಳು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಹಿತ ಕಾಪಾಡಲು ಸಲಹೆ ನೀಡಿದರೆ ಅಂತವರಿಗೆ ದೇಶದ್ರೋಶದ ಪಟ್ಟ ಕಟ್ಟುವುದಾದ್ರೇ, ನಾವೂ ಪತ್ರ ಬರೆಯುತ್ತೇವೆ ನಮ್ಮ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಿ ಎಂದು ಕಿಡಿಕಾರಿದರು.

ABOUT THE AUTHOR

...view details