ಕಲಬುರಗಿ:ಜುಲೈ 11ರಿಂದ ಪಡಿತರ ಕಾರ್ಡ್ಗಳಿಗೆ ಪಡಿರತ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.
'ಪಡಿತರ ದುರ್ಬಳಕೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ' - ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ
ಬಡವರಿಗೆ ನೀಡುವ ಪಡಿತರ ದುರ್ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಸುದ್ದಿಗೋಷ್ಠಿ
ನಗರದಲ್ಲಿಂದು ಮಾತನಾಡಿದ ಅವರು, ಆಯಾ ಭಾಗದಲ್ಲಿ ಉಪಯೋಗಿಸುವ ಆಹಾರ ಪದ್ಧತಿಯನ್ವಯ ಅಕ್ಕಿ-ಜೋಳ-ಗೋಧಿ ಮತ್ತು ಅಕ್ಕಿ- ರಾಗಿ-ಗೋಧಿ ಕೊಡಲಾಗುವುದು ಹಾಗೂ ಒಂದು ಕುಟುಂಬಕ್ಕೆ ಒಂದು ಕೆ.ಜಿ. ಬೇಳೆಯೂ ಕೊಡಲಾಗುವುದು ಎಂದರು.
ಇನ್ನು ಬಡವರಿಗೆ ನೀಡುವ ಪಡಿತರ ದುರ್ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು. ಕೊರೊನಾ ವೇಳೆಯೂ ಕೆಲವೆಡೆ ಪಡಿತರ ದುರ್ಬಳಕೆಯಾಗಿದ್ದು, ಇದನ್ನು ಸಹಿಸಲಾಗುವುದಿಲ್ಲ. ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಿದರು.