ಸೇಡಂ: ಶನಿವಾರ ನಡೆದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. 23 ಸದಸ್ಯ ಬಲದ ನಡುವೆ 13 ಸದಸ್ಯರ ಬೆಂಬಲ ಪಡೆದು ಕಮಲ ಗೆದ್ದು ಬೀಗಿದೆ.
ಬಿಜೆಪಿ ಪಾಲಿಗೆ ಒಲಿದ ಸೇಡಂ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿ - ಪುರಸಭೆ ಚುನಾವಣೆ 2020
23 ಜನ ಸದಸ್ಯ ಬಲ ಹೊಂದಿರುವ ಸೇಡಂ ಪುರಸಭೆಯಲ್ಲಿ 13 ಮತಗಳ ಪಡೆಯುವ ಮೂಲಕ ಬಿಜೆಪಿ ಪಾಳಯ ಗೆದ್ದಿದೆ. ಬಿಜೆಪಿ ಸದಸ್ಯರಿಗೆ ಸಂಸದ ಡಾ. ಉಮೇಶ ಜಾಧವ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಸಾಥ್ ನೀಡಿದ್ದರು.
ಸೇಡಂ ಪುರಸಭೆ
23 ಜನ ಸದಸ್ಯ ಬಲ ಹೊಂದಿರುವ ಪುರಸಭೆಯಲ್ಲಿ 13 ಜನ ಬಿಜೆಪಿ ಸದಸ್ಯರಿಗೆ ಸಂಸದ ಡಾ.ಉಮೇಶ ಜಾಧವ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಸಾಥ್ ನೀಡಿದ್ದು ಬಿಜೆಪಿ ಪರವಾಗಿ 15 ಮತ ಚಲಾವಣೆಯಾಗಿವೆ.
ಇನ್ನು ಕಾಂಗ್ರೇಸ್ ಪರವಾಗಿ 10 ಜನ ಮತ ಚಲಾಯಿಸಿದ್ದಾರೆ. ಬಿಜೆಪಿಯ ಚನ್ನಮ್ಮ ಪಾಟೀಲ ಅಧ್ಯಕ್ಷೆಯಾಗಿ ಮತ್ತು ಶಿವಾನಂದ ಸ್ವಾಮಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪುರಸಭೆ ಕಚೇರಿ ಎದುರುಗಡೆ ಸೇರಿದ್ದ ನೂರಾರು ಜನ ಕಾರ್ಯಕರ್ತರು ಬಿಜೆಪಿ ಜಯಗಳಿಸುತ್ತಲೇ ಪಟಾಕಿ ಸಿಡಿಸಿ ಸಂಭ್ರಮಿಸಿದರು.