ಕಲಬುರಗಿ:ತೈಲ ಟ್ಯಾಂಕರ್ ಮತ್ತು ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಕಲಬುರಗಿ ನಗರ ಹೊರವಲಯದ ಶಹಬಾದ್ ರಸ್ತೆಯ ಶೆಟ್ಟಿ ಕಾಲೇಜು ಬಳಿ ಸಂಭವಿಸಿತು. ಕಲಬುರಗಿ ನಗರದ ನಿವಾಸಿಗಳಾದ 21 ವರ್ಷದ ಅಮಿತ್ ಮತ್ತು 22 ವರ್ಷದ ಆದರ್ಶ್ ಸ್ಥಳದಲ್ಲೇ ಮೃತಪಟ್ಟರೆ, ಮಹಾಂತೇಶ್ ಪರಿಸ್ಥಿತಿ ಗಂಭೀರವಾಗಿದೆ.
ಕಲಬುರಗಿ: ತೈಲ ಟ್ಯಾಂಕರ್-ಕಾರು ಡಿಕ್ಕಿ, ಇಬ್ಬರು ದುರ್ಮರಣ - Accident in Kalaburagi
ಕಲಬುರಗಿ ನಗರದಿಂದ ಶಹಬಾದ್ ಕಡೆ ಹೊರಟಿದ್ದ ಸ್ವಿಫ್ಟ್ ಕಾರು ಮತ್ತು ಶಹಬಾದ್ ಕಡೆಯಿಂದ ಕಲಬುರಗಿ ನಗರದತ್ತ ಬರುತ್ತಿದ್ದ ತೈಲ ಟ್ಯಾಂಕರ್ ಮಧ್ಯೆ ಅಪಘಾತ ಸಂಭವಿಸಿದೆ.
ಆಯಿಲ್ ಟ್ಯಾಂಕರ್ ಸ್ವಿಫ್ಟ್ ಡಿಸೈರ್ ಕಾರು ಮಧ್ಯೆ ಡಿಕ್ಕಿ
ಕಾರು ಕಲಬುರಗಿ ನಗರದಿಂದ ಶಹಬಾದ್ ಕಡೆಗೆ ಮತ್ತು ಶಹಬಾದ್ ಕಡೆಯಿಂದ ಕಲಬುರಗಿ ನಗರದತ್ತ ಟ್ಯಾಂಕರ್ ಸಂಚರಿಸುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಇಬ್ಬರ ಮೃತದೇಹವನ್ನು ಕಾರಿನಿಂದ ಹೊರತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಮಾಡಿದರು. ಕಲಬುರಗಿ ಸಂಚಾರಿ ಠಾಣೆ 2ರಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಕ್ರೂಸರ್-ಕಾರು ನಡುವೆ ಮುಖಾಮುಖಿ ಡಿಕ್ಕಿ: ತೆಲಂಗಾಣದ ಇಬ್ಬರು ಸಾವು