ಕರ್ನಾಟಕ

karnataka

ETV Bharat / city

ವಾಣಿಜ್ಯ ನಗರಿಯಲ್ಲಿ ಸಂಚಾರ ನಿಯಮಕ್ಕಿಲ್ಲ ಕಿಮ್ಮತ್ತು... ಸಾರ್ವಜನಿಕರು ಗರಂ! - Signal pole

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾರಿಗೆ ಸಂಚಾರದಲ್ಲಿನ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇನ್ನು ಈ ಬಗ್ಗೆ ತೆಲೆಬಿಸಿ ಮಾಡಿಕೊಳ್ಳದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ವಾಣಿಜ್ಯ ನಗರಿಯಲ್ಲಿ ಸಾರಿಗೆ ಸಂಚಾರದ ಅವ್ಯವಸ್ಥೆ

By

Published : May 27, 2019, 7:55 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಚಾರ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಸಾರಿಗೆ ಸಂಚಾರದಲ್ಲಿನ ಸಮಸ್ಯೆಗಳು ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇವೆ ವಿನಃ ಯಾವುದೇ ಅಭಿವೃದ್ಧಿಯಾಗಲಿ ಅಥವಾ ಬದಲಾವಣೆಯಾಗಲಿ ಕಾಣುತ್ತಿಲ್ಲ. ಸಾರ್ವಜನಿಕರಿಗೆ ಸಂಚಾರಿ ಕಾಯ್ದೆಗಳ ಬಗ್ಗೆ ಜವಾಬ್ದಾರಿ ಇಲ್ಲದಿರುವುದಕ್ಕೆ ನಗರದ ಸಂಚಾರದಲ್ಲಿ ಅವ್ಯವಸ್ಥೆ ಉಂಟಾಗಲು ಕಾರಣ ಎನ್ನಲಾಗುತ್ತಿದೆ.

ನಗರದ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೊಪ್ಪಿಕರ್​ ರಸ್ತೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿರುವುದು ಇದಕ್ಕೆ ಸಾಕ್ಷಿ. ಚಿಟಗುಪ್ಪಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರು ಇಲ್ಲಿ ರಸ್ತೆ ದಾಟಲು ಹರಸಾಹಸ‌ ಪಡಬೇಕು. ಹೀಗಿದ್ದರೂ ಸಂಚಾರಿ ಪೊಲೀಸರು ಇದರ ಬಗ್ಗೆ ತೆಲೆಕೆಡಿಸಿಕೊಳ್ಳುತ್ತಿಲ್ಲ. ಟ್ರಾಫಿಕ್​​ ಸಿಬ್ಬಂದಿ ವಿಜಲ್ ಹಾಕಿದರೂ ವಾಹನ ಸವಾರರು ಹಾಗೇ ಮುನ್ನುಗ್ಗುತ್ತಾರೆ‌. ಇದರಿಂದ ಸಂಚಾರದಲ್ಲಿ ಅವ್ಯವಸ್ಥೆ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಹುಬ್ಬಳ್ಳಿಯಲ್ಲಿ ಮಿತಿಮೀರಿದ ಟ್ರಾಫಿಕ್​ ಜಾಮ್​

ಕೆಲವು ಕಡೆ ಸಿಗ್ನಲ್ ಕಂಬಗಳು ಇಲ್ಲದ್ದರಿಂದ ಸಂಚಾರ ನಿಯಮ ಗಾಳಿಗೆ ತೂರಿ ವಾಹನ ಸವಾರರು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಇನ್ನು ಕೆಲವೆಡೆ ಸಿಗ್ನಲ್ ಕಂಬಗಳಿದ್ದರೂ ಕೆಲಸಕ್ಕೆ ಬರುತ್ತಿಲ್ಲ. ಸಂಚಾರ ಸುವ್ಯವಸ್ಥೆಗೆ ಹಲವು ಕಾನೂನು ಕ್ರಮಗಳನ್ನು ಜರುಗಿಸಲಾಗಿದೆ. ಹಲವೆಡೆ ಸಿಸಿ ಕ್ಯಾಮರಾ, ಸಿಗ್ನಲ್ ನಿರ್ಮಾಣ ಮಾಡಲಾಗಿದೆ. ಆದರೆ, ಕೆಲವು ಸಿಗ್ನಲ್ ಕಂಬಗಳನ್ನು ಹೊರತುಪಡಿಸಿ ಎಲ್ಲವೂ ನಾಮಮಾತ್ರ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

ABOUT THE AUTHOR

...view details