ಕರ್ನಾಟಕ

karnataka

ETV Bharat / city

ಎಸ್ಎಸ್ಎಲ್​ಸಿ ಮಾರ್ಕ್ಸ್ ಎಡವಟ್ಟು: ಪಿಯು ಪ್ರವೇಶ ಸಿಗದೇ ವಿದ್ಯಾರ್ಥಿ ಆತಂಕ - SSLC result

ರಮೇಶ ಬನ್ನಪ್ಪನವರ ಧಾರವಾಡ ನಗರದ ಆರ್​ಎಲ್​ಎಸ್​ ಶಾಲೆಯ ವಿದ್ಯಾರ್ಥಿ. ಇತ್ತೀಚೆಗೆ ನಡೆದ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಚೆನ್ನಾಗಿಯೇ ಬರೆದಿದ್ದ. ಆದರೆ ಕನ್ನಡದಲ್ಲಿ ಆತನಿಗೆ ಬರಬೇಕಾದ ಅಂಕದ ಬದಲಿಗೆ ಕೇವಲ 10 ಅಂಕ‌ ಬಂದಿತ್ತು. ಆದರೆ ಉತ್ತರ ಪತ್ರಿಕೆಯ ಪ್ರತಿ ನೋಡಿದಾಗ ಅದರಲ್ಲಿ 82 ಅಂಕ ಕೊಡಲಾಗಿತ್ತು.

SSLC Marks mistake student got 82 marks but Entered 10 marks in result sheet
ಎಸ್ಎಸ್ಎಲ್​ಸಿ ಮಾರ್ಕ್ಸ್ ಯಡವಟ್ಟು: ಪಿಯು ಪ್ರವೇಶ ಸಿಗದೇ ವಿದ್ಯಾರ್ಥಿ ಆತಂಕ

By

Published : May 31, 2022, 11:06 PM IST

ಧಾರವಾಡ:ಕೆಲಗೇರಿ ಬಡಾವಣೆ ನಿವಾಸಿ ರಮೇಶ ಬನ್ನಪ್ಪನವರ ಧಾರವಾಡ ನಗರದ ಆರ್​ಎಲ್​ಎಸ್​ ಶಾಲೆಯ ವಿದ್ಯಾರ್ಥಿ. ಇತ್ತೀಚೆಗೆ ನಡೆದ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಚೆನ್ನಾಗಿಯೇ ಬರೆದಿದ್ದ. ಆದರೆ ಕನ್ನಡದಲ್ಲಿ ಆತನಿಗೆ ಬರಬೇಕಾದ ಅಂಕದ ಬದಲಿಗೆ ಕೇವಲ 10 ಅಂಕ‌ ಬಂದಿತ್ತು.

ಆದರೆ ರಮೇಶನಿಗೆ ಕನ್ನಡದಲ್ಲಿ 80 ರಿಂದ 85 ಅಂಕದ ನಿರೀಕ್ಷೆ ಇತ್ತು. ಈ ಫಲಿತಾಂಶದಿಂದ ಮನೆಯವರು ಮತ್ತು ರಮೇಶ ತುಂಬಾ ಬೇಸಗೊಂಡಿದ್ದರು. ಶಾಲೆಗೆ ಹೋಗಿ ವಿಚಾರಿಸಿದಾಗ ಮರು ಮೌಲ್ಯಮಾಪನಕ್ಕೆ ಮತ್ತು ಉತ್ತರ ಪತ್ರಿಕೆ ಪತ್ರಿ ಪಡೆಯಲು ಅರ್ಜಿ ಹಾಕುವಂತೆ ಹೇಳುತ್ತಾರೆ. ಆದರಂತೆ ಉತ್ತರ ಪತ್ರಿಕೆಯ ಪ್ರತಿ ನೋಡಿದಾಗ ಅದರಲ್ಲಿ 82 ಅಂಕ ಕೊಡಲಾಗಿತ್ತು.

ಎಸ್ಎಸ್ಎಲ್​ಸಿ ಮಾರ್ಕ್ಸ್ ಯಡವಟ್ಟು: ಪಿಯು ಪ್ರವೇಶ ಸಿಗದೇ ವಿದ್ಯಾರ್ಥಿ ಆತಂಕ

ಆದರೆ ಫಲಿತಾಂಶ ಪಟ್ಟಿಯಲ್ಲಿ ತಪ್ಪು ನಮೂದಾಗಿತ್ತು. ರಮೇಶನ ಫಲಿತಾಂಶದಲ್ಲಿ ಫೇಲ್​ ಎಂದು ಇದ್ದ ಕಾರಣ ಪಿಯುಸಿಗೆ ಸೇರಲಾಗದೇ ಸಮಸ್ಯೆಯಾಗಿದೆ. ಅದಲ್ಲದೇ ಪಿಯುಸಿ ಪ್ರವೇಶವೂ ಮುಗಿದಿರುವುದರಿಂದ ತೊಂದರೆ ಆಗಿದೆ ಎಂದು ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ:ರಾಜ್ಯದಲ್ಲಿಂದು 197 ಮಂದಿಯಲ್ಲಿ ಕೋವಿಡ್ ಸೋಂಕು ದೃಢ: ಓರ್ವ ಸಾವು

ABOUT THE AUTHOR

...view details