ಹುಬ್ಬಳ್ಳಿ :ಮಹಾನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಂಪನಿಯಿಂದ ಪ್ರತಿ ಮನೆಗಳ ಮುಂದೆ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಿ ವರ್ಷ ಕಳೆದಿಲ್ಲ. ಆಗಲೇ ಹಾಳಾಗಿದ್ದು, ಗುತ್ತಿಗೆ ಪಡೆದ ಕಂಪನಿಯ ಸಿಬ್ಬಂದಿ ವೈಜ್ಞಾನಿಕವಾಗಿ ಅಳವಡಿಸದ ಪರಿಣಾಮ ಮೂಲ ಉದ್ದೇಶಕ್ಕೆ ಹಿನ್ನಡೆಯಾದಂತಾಗಿದೆ.
ಓದಿ: ಫೈನಲ್ ಪಂದ್ಯದಲ್ಲಿ ಕೊಹ್ಲಿ ಪಡೆ ಸ್ಫೋಟಕ ಬ್ಯಾಟಿಂಗ್... ಇಂಗ್ಲೆಂಡ್ ಗೆಲುವಿಗೆ 225 ರನ್ಗಳ ಬೃಹತ್ ಟಾರ್ಗೆಟ್
ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ, ಪ್ರತಿ ಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಲಾಗಿದೆ. ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಯೋಜನೆಗೆ ಪೂರಕವಾಗಿ ಜಪಾನ್ ಮೂಲದ ಎನ್‌ಇಸಿ ಕಂಪನಿ ಈ ಕಾರ್ಯ ನಿರ್ವಹಿಸಿದೆ.
ಇದಕ್ಕಾಗಿ ಸ್ಮಾರ್ಟ್‌ಸಿಟಿ ಕಂಪನಿಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈಗಾಗಲೇ ಮಹಾನಗರ ವ್ಯಾಪ್ತಿಯಲ್ಲಿ 2.10 ಲಕ್ಷ ಮನೆಗಳಿಗೆ ಟ್ಯಾಗ್ ಅಳವಡಿಸುವ ಕೆಲಸ ಪೂರ್ಣಗೊಂಡಿದೆ. ಆದರೆ, ಟ್ಯಾಗ್ ಅಳವಡಿಸಿ ತಿಂಗಳು ಕಳೆದಿಲ್ಲ.
ಕೆಲವೆಡೆ ಮನೆಗಳ ಮುಂದೆ ಟ್ಯಾಗ್‌ಗಳು ಕಾಣುತ್ತಿಲ್ಲ. ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸುವ ಕೆಲಸ ಸರಿಯಾಗಿ ಆಗದಿರುವುದು ಕೆಲವಡೆ ಕಿತ್ತು ಹೋಗಿವೆ. ಸಿಬ್ಬಂದಿ ನಿರ್ಲಕ್ಷದ ಪರಿಣಾಮ ಟ್ಯಾಗ್‌ಗಳು ಕೀಳುತ್ತಿವೆ.
ಒಟ್ಟಾರೆ ಮನೆ ಮುಂದೆ ಎರಡು ಸ್ಕ್ರೂ ಹಾಕಿ ಕೂಡಿಸಿದರಾಯ್ತು ಎನ್ನುವ ಬೇಕಾ ಬಿಟ್ಟಿಯ ಮನಸ್ಥಿತಿ ಎದ್ದು ಕಾಣುತ್ತಿದೆ. ಈ ಟ್ಯಾಗ್‌ಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಜನರು ಮನೆಗೆ ಅಳವಡಿಸಿದ ಟ್ಯಾಗ್ ಇದೆಯೋ ಇಲ್ಲವೋ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ಅಳವಡಿಸಿರುವ ಟ್ಯಾಗ್ ಕೆಲಸ ನಿರ್ವಹಿಸುತ್ತಿರುವ ಬಗ್ಗೆಯೂ ಸ್ಮಾರ್ಟ್‌ಸಿಟಿ ಅಧಿಕಾರಿಗಳಾಗಲಿ ಅಥವಾ ಗುತ್ತಿಗೆದಾರರು ಕಾಳಜಿವಹಿಸಿಲ್ಲ. ಆದ್ದರಿಂದ ಕೂಡಲೇ ಅಧಿಕಾರಿಗಳು ಇತ್ತ ಗಮನಿಸಿ ಸಮಸ್ಯೆ ಪರಿಹರಿಸಬೇಕಿದೆ.