RSS ಟೀಕಿಸಿದ್ರೆ ಮುಸ್ಲಿಂ ಮತಗಳು ಅವರ ಪರವಾಲುತ್ತವೆ ಎಂಬ ಭ್ರಮೆ.. ಸಿದ್ದು-ಹೆಚ್‌ಡಿಕೆಗೆ ಶೆಟ್ಟರ್ ಟಾಂಗ್ - ಹುಬ್ಬಳ್ಳಿ
ಆರ್‌ಎಸ್‌ಎಸ್ ಟೀಕಿಸಿದರೆ ಮುಸ್ಲಿಂ ಮತದಾರರು ತಮ್ಮ ಪರವಾಗುತ್ತಾರೆಂಬ ಭ್ರಮೆಯಲ್ಲಿ ಇವರು ಇದ್ದಾರೆ. ಮುಸ್ಲಿಮರಿಗೂ ಇವರ ಬಂಡವಾಳ ಗೊತ್ತಾಗಿದೆ. ಅನೇಕರು ಬಿಜೆಪಿ ಸೇರಿದ್ದಾರೆ. ಸಂಘ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ..
ಹುಬ್ಬಳ್ಳಿ :ಕೇವಲ ಮತಬ್ಯಾಂಕ್‍ಗಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹಚ್ ಡಿ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು.
ನಗರದಲ್ಲಿಂದು ರಾಷ್ಟ್ರೋತ್ಥಾನ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಲ್ಲದಿದ್ದರೆ ಈ ವೇಳೆಗೆ ಭಾರತ ಮೂರ್ನಾಲ್ಕು ಪಾಕಿಸ್ತಾನ ಆಗುತ್ತಿತ್ತು. ದೇಶಪ್ರೇಮ ಸಂಘಟನೆ ಬಗ್ಗೆ ಇಲ್ಲಸಲ್ಲದ ಟೀಕೆ ಮೂಲಕ ಇಬ್ಬರು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಳುತ್ತಿದ್ದಾರೆ ಎಂದರು.
ಸಂಘ-ಬಿಜೆಪಿ ಒಂದೇ, ನಾವು ಸಂಘ ಮೂಲದಿಂದ ಬಂದವರು. ಇಂದಿಗೂ ಸಂಘ ಕಾರ್ಯಕರ್ತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಸಂಘ ಇದ್ದ ಕಾರಣಕ್ಕೆ ದೇಶದಲ್ಲಿ ಸುರಕ್ಷತೆ, ಜನರಿಗೆ ಗೌರವ ಇದೆ. ಮತಬ್ಯಾಂಕ್‍ಗಾಗಿ ಆರ್‌ಎಸ್‍ಎಸ್ ಬಗ್ಗೆ ಕೀಳಾಗಿ ಮಾತನಾಡುವುದನ್ನು ಸಿದ್ದರಾಮಯ್ಯ, ಕುಮಾರಸ್ವಾಮಿ ನಿಲ್ಲಿಸಬೇಕು ಎಂದರು.
ಆರ್‌ಎಸ್‌ಎಸ್ ಟೀಕಿಸಿದರೆ ಮುಸ್ಲಿಂ ಮತದಾರರು ತಮ್ಮ ಪರವಾಗುತ್ತಾರೆಂಬ ಭ್ರಮೆಯಲ್ಲಿ ಇವರು ಇದ್ದಾರೆ. ಮುಸ್ಲಿಮರಿಗೂ ಇವರ ಬಂಡವಾಳ ಗೊತ್ತಾಗಿದೆ. ಅನೇಕರು ಬಿಜೆಪಿ ಸೇರಿದ್ದಾರೆ. ಸಂಘ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಜಗದೀಶ ಶೆಟ್ಟರ್ ಹೇಳಿದರು.