ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ ಜೆ ಪಿ ನಗರದಲ್ಲಿ ಶಿವಳ್ಳಿ ಅಂತಿಮ ದರ್ಶನ... ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ - ಶಿವಳ್ಳಿ ಪಾರ್ಥಿವ ಶರೀರ

ಅಗಲಿದ ಸಚಿವ ಸಿ ಎಸ್ ಶಿವಳ್ಳಿಯವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ಜೆಪಿ ನಗರ ನಿವಾಸಕ್ಕೆ ರವಾನಿಸಲಾಗಿದೆ. ಸದ್ಯಕ್ಕೆ ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

JP Nagar residence

By

Published : Mar 22, 2019, 5:04 PM IST

Updated : Mar 22, 2019, 5:25 PM IST

ಹುಬ್ಬಳ್ಳಿ: ಇಂದು ಹೃದಯಾಘಾತದಿಂದ ನಿಧನರಾದ ಸಚಿವ ಸಿ ಎಸ್ ಶಿವಳ್ಳಿಯವರ ಪಾರ್ಥಿವ ಶರೀರವನ್ನು ಜೆಪಿ ನಗರ ನಿವಾಸಕ್ಕೆ ರವಾನಿಸಲಾಗಿದೆ.

ಹುಬ್ಬಳ್ಳಿ ಆಸ್ಪತ್ರೆಯಿಂದ, ಹುಬ್ಬಳ್ಳಿಯ ಜೆಪಿ ನಗರದ ನಿವಾಸಕ್ಕೆ ಶಿವಳ್ಳಿ ಮೃತದೇಹವನ್ನು ಆಂಬ್ಯುಲೆನ್ಸ್​ನಲ್ಲಿ ಕೊಂಡೊಯ್ಯಲಾಯಿತು. ಸಂಜೆ ಆರು ಗಂಟೆಯವರೆಗೆ ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶಿವಳ್ಳಿ ಮನೆ ಮುಂದೆಯೂ ಸಾಕಷ್ಟು ಅಭಿಮಾನಿಗಳು ಸೇರಿದ್ದು, ದುಃಖ ಮಡುಗಟ್ಟಿದೆ.

ಶಿವಳ್ಳಿ ಪಾರ್ಥಿವ ಶರೀರ ಜೆಪಿ ನಗರ ನಿವಾಸಕ್ಕೆ ರವಾನೆ

ಇನ್ನುಅಂತಿಮ ದರ್ಶನಕ್ಕೆ ಮದಿನಾ ಕಾಲೋನಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ದೀಪಾ ಜೋಳನ್ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಚರ್ಚೆ ನಡೆಸಿದ್ದಾರೆ. ಇಂದು ರಾತ್ರಿಯವರಗೆ ಮಾತ್ರ ಹುಬ್ಬಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಮಾಡಲಾಗಿದೆ. ರಾತ್ರಿ ಸ್ವಗ್ರಾಮ ಯರಗುಪ್ಪಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ.

Last Updated : Mar 22, 2019, 5:25 PM IST

ABOUT THE AUTHOR

...view details