ಕರ್ನಾಟಕ

karnataka

ETV Bharat / city

ಎರಡನೇ ದಿನದ ಲಾಕ್​​ಡೌನ್.. ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದ ವಾಹನಗಳು ಇಷ್ಟು.. - ವಾಣಿಜ್ಯ ನಗರಿ ಹುಬ್ಬಳ್ಳಿ

ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದರೂ, ಜನರು ಮಾತ್ರ ಯಾವುದನ್ನು ಕಿವಿಗೆ ಹಾಕಿಕೊಳ್ಳದೆ ಖರೀದಿಯಲ್ಲಿ ಮಗ್ನರಾಗಿದ್ದರು..

second-day-lockdown-effect-in-hubbali-news
ಎರಡನೇ ದಿನದ ಲಾಕ್​​ಡೌನ್

By

Published : May 11, 2021, 6:40 PM IST

ಹುಬ್ಬಳ್ಳಿ:ಲಾಕ್​​ಡೌನ್​ ಎರಡನೇ ದಿನವೂ ವಾಹನಗಳ ಓಡಾಟ ಮುಂದುವರೆದಿದೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಾಹನ ಸವಾರರು ರಸ್ತೆಗಿಳಿದಿದ್ದಾರೆ.‌

ಎರಡನೇ ದಿನದ ಲಾಕ್​​ಡೌನ್

ಓದಿ: ವ್ಯಾಕ್ಸಿನ್ ಇಲ್ಲದೇ ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದ್ದಾರೆ.. ಸಿದ್ದರಾಮಯ್ಯ

ಆಟೋ ಸೇರಿದಂತೆ ದ್ವಿಚಕ್ರ ವಾಹನಗಳ ಓಡಾಟ ಸಾಮಾನ್ಯವಾಗಿತ್ತು. ನಿನ್ನೆ ಸುಖಾಸುಮ್ಮನೆ ರಸ್ತೆಗಿಳಿದಿದ್ದವರಿಗೆ ಪೊಲೀಸರು ಶಾಕ್ ಕೊಟ್ಟಿದ್ದರು.

ಹು-ಧಾ ನಗರಗಳಲ್ಲೇ ಒಟ್ಟು 503 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು, ಗ್ರಾಮಾಂತರ ಭಾಗಗಳಲ್ಲಿ 430 ಬೈಕ್ಗಳನ್ನ ಸೀಜ್ ಮಾಡಲಾಗಿತ್ತು.‌

ನಿನ್ನೆ ಮೊದಲ ದಿನ ಹಿನ್ನೆಲೆ ರಿಯಾಯಿತಿ ಮೇರೆಗೆ ಕೆಲ ಜನರನ್ನ ಬಿಟ್ಟು ಕಳುಹಿಸಿದ್ದರು. ಆದರೆ, ಇಂದು ಮತ್ತೆ ಓಡಾಟ ಆರಂಭಿಸಿದ ವಾಹನ ಸವಾರರಿಗೆ ಪೊಲೀಸರು ಶಾಕ್ ಕೊಡುತ್ತಿದ್ದಾರೆ.

ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮಾಯ :ನಗರದ ಎಪಿಎಂಸಿಯಲ್ಲಿ ತರಕಾರಿ ಖರೀದಿಗೆ ಜನರು ಮುಗಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ಖರೀದಿಗೆ ಜನರು ಮುಗಿ ಬಿದ್ದಿದ್ದರು.

ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದರೂ, ಜನರು ಮಾತ್ರ ಯಾವುದನ್ನು ಕಿವಿಗೆ ಹಾಕಿಕೊಳ್ಳದೆ ಖರೀದಿಯಲ್ಲಿ ಮಗ್ನರಾಗಿದ್ದರು.

ABOUT THE AUTHOR

...view details