ಹುಬ್ಬಳ್ಳಿ:ನಾನು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ಅಪ್ಪಟ ಸುಳ್ಳು. ಯಾರಾದರೂ ಅದನ್ನು ಪ್ರೂವ್ ಮಾಡಿದರೇ ನಾನು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಬಿಎಸ್ವೈ, RSSನಿಂದ ಬಂದವರು. ನಾವು ಅವರು ತದ್ವಿರುದ್ಧ, ಅವರನ್ನು ಭೇಟಿಯಾಗಿದ್ದು ಸುಳ್ಳು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ಹಾನಗಲ್ ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕಾಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಧಿಕಾರದಲ್ಲಿರುವವರ ಮನೆ ಬಾಗಿಲಿಗೆ ನಾನು ಯಾವತ್ತೂ ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್, ಹೀಗಾಗಿ ನಾನು ಬಿಎಸ್ವೈ ಅವರನ್ನು ಭೇಟಿಯಾಗಿಲ್ಲ ಎಂದರು.
ಎಲ್ಲಕ್ಕೂ ಸಿದ್ದರಾಮಯ್ಯ ಟಾರ್ಗೆಟ್: ಸಲೀಂ - ಉಗ್ರಪ್ಪ ಸಂಭಾಷಣೆ ಹಿಂದೆ ಸಿದ್ದರಾಮಯ್ಯ ಕೈವಾಡ ಎನ್ನುವ ಶೆಟ್ಟರ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹಾಗಿದ್ದರೆ ಯತ್ನಾಳ್, ವಿಶ್ವಾನಾಥ ಅವರಿಗೂ ನಾನೇ ಹೇಳಿದ್ನಾ..? ಹಿಂದೆ ಅನಂತಕುಮಾರ - ಬಿಎಸ್ವೈ ಮಾತನಾಡಿದ್ದರು. ಅದಕ್ಕೂ ನಾನೇ ಕಾರಣನನಾ?.
ಸಿಎಂ ಆದವರೇ ಹೀಗೇ ಮಾತನಾಡಿದರೇ ಹೇಗೆ?. ಎಲ್ಲದಕ್ಕೂ ಸಿದ್ದರಾಮಯ್ಯ ಟಾರ್ಗಟ್ ಮಾಡಿದರೆ ಹೇಗೆ?. ಜಾತಿ ಸಮೀಕ್ಷೆ ಬಗ್ಗೆ ಕೂಡಾ ಜಗದೀಶ್ ಶೆಟ್ಟರ್ ಸುಳ್ಳು ಹೇಳುತ್ತಿದ್ದಾರೆ. ನನ್ನ ಕಾಲದಲ್ಲಿ ಸಮೀಕ್ಷೆ ಪೂರ್ಣ ಆಗಿದ್ದರೆ ನಾನೇ ಹೊರ ತರುತ್ತಿದ್ದೆ ಎಂದು ಅವರು ಹೇಳಿದರು.