ಹುಬ್ಬಳ್ಳಿ:ಕೊರೊನಾ ವೈರಸ್ ತಡೆಗಟ್ಟಲು ನಗರದ ಪ್ರಮುಖ ಚೆಕ್ ಪೋಸ್ಟ್ಗಳಲ್ಲಿ ನಿಯೋಜನೆಗೊಂಡಿದ್ದ ಮೂವರು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಮಾಡಿದ್ದಾರೆ.
'ಹುಬ್ಬಳ್ಳಿ ಲಾಕ್ಡೌನ್': ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಅಮಾನತು - ಕೊರೊನಾ ವೈರಸ್
ಹುಬ್ಬಳ್ಳಿ ನಗರದ ಪ್ರಮುಖ ಚೆಕ್ ಪೋಸ್ಟ್ವೊಂದರಲ್ಲಿ ಲಾಕ್ಡೌನ್ ಹಿನ್ನೆಲೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ ಹಿನ್ನೆಲೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿ ದೀಪಾ ಚೋಳನ್
ಎಂ.ಎ.ಹುಲಗಜ್ಜಿ, ಅಣ್ಣಪ್ಪ ಹೊಸುರ, ರಾಮಪ್ಪ ಕುಂಬಾರ ಅಮಾನತಾದ ಅಧಿಕಾರಿಗಳು. ಧಾರವಾಡ-ಗೋವಾ ರಸ್ತೆಯ ಆಳ್ನಾವರ ಚೆಕ್ ಪೋಸ್ಟ್ನಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ನಿಯೋಜಿತ ಸ್ಥಳದಲ್ಲಿ ಕರ್ತವ್ಯದಲ್ಲಿ ಹಾಜರಿಲ್ಲದ ಕಾರಣ ಅಮಾನತು ಮಾಡಲಾಗಿದೆ ಎಂದು ಗೊತ್ತಾಗಿದೆ.