ಧಾರವಾಡ: ಹವಾಮಾನ ವೈಪರೀತ್ಯದ ಹಿನ್ನೆಲೆ ಇನ್ನೆರಡು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಆದರೆ ಯಾವುದೇ ಹಾನಿಕಾರಕ ಮಳೆ ಇರುವುದಿಲ್ಲ ಎಂದು ಹವಾಮಾನ ತಜ್ಞ ಡಾ. ಆರ್.ಎಚ್. ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕಡಲ ತೀರದ ಭಾಗದಲ್ಲಿ ಮಳೆ ಆಗಲಿದೆ. 48 ಗಂಟೆಗಳ ಬಳಿಕ ಪುನಃ ಬಿಸಿಲು ಬರಲಿದೆ. ಡಿ. 1ರ ಬಳಿಕ ಮತ್ತೊಂದು ವಾಯಭಾರ ಕುಸಿತ ಆಗಲಿದ್ದು, ಅಂಡಮಾನ್, ನಿಕೋಬಾರ್ ಭಾಗದಲ್ಲಿ ಇದು ಸಂಭವಿಸಲಿದೆ ಎಂದು ಮಾಹಿತಿ ನೀಡಿದರು.