ಹುಬ್ಬಳ್ಳಿ: ಹೊಸ ಕಾಯ್ದೆ ಕೃಷಿ ವಲಯವನ್ನು ಪರಿವರ್ತಿಸುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಇದು ರೈತರ ಪರವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಕೃಷಿ ಕ್ಷೇತ್ರದ ಮಸೂದೆ ರೈತರ ಪರವಾಗಿದ್ದು, ಆದಾಯ ಹೆಚ್ಚಿಸುತ್ತದೆ: ಮಹೇಶ್ ಟೆಂಗಿನಕಾಯಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದು, ಮಸೂದೆಗಳು ರೈತರನ್ನು ಸರ್ಕಾರಿ ನಿಯಂತ್ರಿತ ಮಾರುಕಟ್ಟೆಗಳಿಂದ ಸ್ವತಂತ್ರವಾಗಿಸುತ್ತವೆ ಮತ್ತು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ನೀಡುತ್ತದೆ ಎಂದರು.
ರೈತರು ಮತ್ತು ವ್ಯಾಪಾರಿಗಳು ಹೊರಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ವ್ಯವಸ್ಥೆಯನ್ನು ರಚಿಸಲು ಈ ಮಸೂದೆ ಒತ್ತು ನೀಡಿದೆ. ಅಂತಾರಾಜ್ಯ ವ್ಯಾಪಾರವನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಈ ಮಸೂದೆ ಮೂಲಕ ಹೊಸ ನಿಯಮ ಜಾರಿಗೆ ತಂದಿದೆ ಎಂದು ಅವರು ಹೇಳಿದರು.
ಕೃಷಿ-ವ್ಯಾಪಾರ ಕಂಪನಿಗಳು, ರಫ್ತುದಾರರು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ತೊಡಗಿಸಿಕೊಳ್ಳಲು ರೈತರಿಗೆ ಅನುವು ಮಾಡಿಕೊಡುವ ಒಪ್ಪಂದಗಳ ಚೌಕಟ್ಟನ್ನು ಈ ಮಸೂದೆಗಳು ರೂಪಿಸುತ್ತವೆ. ಕಡಿಮೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪ್ರಯೋಜನಗಳನ್ನು ಈ ಮುಖಾಂತರ ಒದಗಿಸಲಾಗುವುದು. ಎಪಿಎಂಸಿಯನ್ನು ಯಾವುದೇ ಕಾರಣಕ್ಕೆ ಮುಚ್ಚುವುದಿಲ್ಲ ಎಂದ ಟೆಂಗಿನಕಾಯಿ, ಈಗಾಗಲೇ ನಮ್ಮ ಪಕ್ಷ ರೈತರ ಕಷ್ಟ ಸುಖದಲ್ಲಿ ಭಾಗಿಯಾಗಿದೆ ಎಂದರು.