ಧಾರವಾಡ: ಸಚಿವ ಸಂಪುಟ ವಿಸ್ತರಣೆ ವಿಳಂಬದ ಅಸಲಿ ಕಾರಣವನ್ನು ಧಾರವಾಡದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಚ್ಚಿಟ್ಟಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಬಿಚ್ಚಿಟ್ಟರು ಡಿಸಿಎಂ ಲಕ್ಷ್ಮಣ ಸವದಿ..
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸೇರಲಿದ್ದಾರೆ. ಅಮಿತ್ ಶಾ ಇಂದು ಹುಬ್ಬಳ್ಳಿಯಲ್ಲಿಯೇ ಇರಲಿದ್ದಾರೆ. ಬೆಂಗಳೂರು ಅಥವಾ ಹುಬ್ಬಳ್ಳಿ ಎಲ್ಲಿಯಾದರೂ ಸಮಯ ಸಿಕ್ಕರೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಾರೆ ಎಂದು ಸ್ಪಷ್ಟಪಡಿಸಿದರು. ಧನುರ್ಮಾಸ ಇರುವ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಧನುರ್ಮಾಸ ಇರುವುದರಿಂದ ಸಂಪುಟ ವಿಸ್ತರಣೆ ಆಗಬಾರದು ಅಂತಾ ಬಹಳ ಜನ ಹೇಳಿದ್ರು. ಹೊಸ ಶಾಸಕರೆಲ್ಲ ಸಚಿವರಾಗುತ್ತಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವಾಗ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಂಪುಟ ವಿಸ್ತರಣೆ ವಿಳಂಬಕ್ಕೆ ಹೈಕಮಾಂಡ್ ಆಗಲಿ ಅಥವಾ ಬೇರೆ ಯಾವುದೇ ಕಾರಣ ಇಲ್ಲ. ಧನುರ್ಮಾಸ ಕಾರಣ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಅಮಿತ್ ಶಾ ಮತ್ತು ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸೇರಲಿದ್ದಾರೆ. ಅಮಿತ್ ಶಾ ಇಂದು ಹುಬ್ಬಳ್ಳಿಯಲ್ಲಿಯೇ ಇರಲಿದ್ದಾರೆ. ಬೆಂಗಳೂರು ಅಥವಾ ಹುಬ್ಬಳ್ಳಿ ಎಲ್ಲಿಯಾದರೂ ಸಮಯ ಸಿಕ್ಕರೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಾರೆ ಎಂದು ಸ್ಪಷ್ಟಪಡಿಸಿದರು. ಧನುರ್ಮಾಸ ಇರುವ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಧನುರ್ಮಾಸ ಇರುವುದರಿಂದ ಸಂಪುಟ ವಿಸ್ತರಣೆ ಆಗಬಾರದು ಅಂತಾ ಬಹಳ ಜನ ಹೇಳಿದ್ರು. ಹೊಸ ಶಾಸಕರೆಲ್ಲ ಸಚಿವರಾಗುತ್ತಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು.