ಧಾರವಾಡ:ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೊರಟ್ಟಿಗೆ ಹೇಗೆ ರಿಲೇಷನ್ ಇದೆ ಅಂತ ನನಗೆ ಗೊತ್ತಿಲ್ಲ, ಕುಮಾರಸ್ವಾಮಿ ಕಿಂಗ್ ಮೇಕರ್ ಆಗೋದನ್ನ ಕಾಯುತ್ತೇವೆ ಎಂದುಬಸವರಾಜ ಹೊರಟ್ಟಿಯವರ ಹೇಳಿಕೆಗೆಸಚಿವ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.
ಹೆಚ್ಡಿಕೆ ಕಿಂಗ್ ಮೇಕರ್ ಆಗೋದನ್ನ ಕಾಯ್ತೇವೆ: ಹೊರಟ್ಟಿ ಹೇಳಿಕೆಗೆ ಶೆಟ್ಟರ್ ಟಾಂಗ್ - jagadish shettar statement on h d kumaraswamy
ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಕಿಂಗ್ ಮೇಕರ್ ಎಂಬ ಬಸವರಾಜ ಹೊರಟ್ಟಿ ಹೇಳಿಕೆಗೆ ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ಹಾಗೂ ಹೊರಟ್ಟಿಗೆ ಹೇಗೆ ರಿಲೆಷನ್ ಇದೆ ಅಂತಾ ನನಗೆ ಗೊತ್ತಿಲ್ಲ, ಕುಮಾರಸ್ವಾಮಿ ಕಿಂಗ್ ಮೇಕರ್ ಆಗೋದನ್ನ ಕಾಯ್ತೇವೆ ಎಂದು ವ್ಯಂಗ್ಯವಾಡಿದರು. ಅಲ್ಲದೆ ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಹೊರಟ್ಟಿ ಭ್ರಮೆಯಲ್ಲಿದ್ದಾರೆ. ಸರ್ಕಾರ ಗಟ್ಟಿಯಾಗಿದೆ. ಎಲ್ಲರೂ ಸೇರಿ ಯಡಿಯೂರಪ್ಪ ನೇತೃತ್ವದಲ್ಲಿ ಮೂರುವರೆ ವರ್ಷ ಸರ್ಕಾರ ಮಾಡುತ್ತೇವೆ ಎಂದರು.
ಮಾಜಿ ಸಚಿವ ಆರ್. ಬಿ. ತಿಮ್ಮಾಪೂರ ಯಡಿಯೂರಪ್ಪಗೆ ತೊಂದರೆ ಕೊಡುವ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ತಿಮ್ಮಾಪೂರ ಭ್ರಹ್ಮನಾ? ಹೊರಟ್ಟಿ ಹಾಗೂ ತಿಮ್ಮಾಪೂರ ಹೇಳಿಕೆಗೆ ಉತ್ತರ ಕೊಡಬೇಕಾ ನಾವು ? ಎಂದು ಶೆಟ್ಟರ್ ಗರಂ ಆದ್ರು. ಅವರೇನು ಭವಿಷ್ಯ ನುಡಿಯುವವರಾ, ಅವರ ಎಲ್ಲ ಹೇಳಿಕೆಗೆ ರಿಯಾಕ್ಷನ್ ಕೊಡಲಾಗುತ್ತಾ? ತಿಮ್ಮಾಪೂರ ಅವರು ಮೊದಲು ನಮ್ಮ ಪಕ್ಷಕ್ಕೆ ಬಂದು ಸೇರಲಿ ಎಂದು ಆಹ್ವಾನ ನೀಡಿದರು.