ಹುಬ್ಬಳ್ಳಿ:ವಾಣಿಜ್ಯ ನಗರಿಯಲ್ಲಿರುವ ರಸ್ತೆಗಳನ್ನು ಸುಧಾರಿಸುವಂತೆ ಆಗ್ರಹಿಸಿ ರಸ್ತೆಯಲ್ಲಿನ ಗುಂಡಿಗಳಲ್ಲಿ ಬೋಟ್ ಬಿಡುವು ಮೂಲಕ ಸ್ಥಳೀಯ ನಾಯಕರು ಹಾಗೂ ಮಕ್ಕಳು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಹದಗೆಟ್ಟ ರಸ್ತೆಗಳು: ಗುಂಡಿಗಳಲ್ಲಿ ಬೋಟ್ ಬಿಡುವ ಮೂಲಕ ವಿನೂತನ ಪ್ರತಿಭಟನೆ - Hubli protest news
ಹುಬ್ಬಳ್ಳಿಯಲ್ಲಿನ ರಸ್ತೆಗಳನ್ನು ಸುಧಾರಿಸುವಂತೆ ಆಗ್ರಹಿಸಿ ರಸ್ತೆಯಲ್ಲಿನ ಗುಂಡಿಗಳಲ್ಲಿ ಬೋಟ್ ಬಿಡುವ ಮೂಲಕ ಸ್ಥಳೀಯ ನಾಯಕರು ಹಾಗೂ ಮಕ್ಕಳು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಹದಗೆಟ್ಟ ರಸ್ತೆಗಳು: ಗುಂಡಿಗಳಲ್ಲಿ ಬೋಟ್ ಓಡಿಸುವ ಮೂಲಕ ವಿನೂತನ ಪ್ರತಿಭಟನೆ
ಸಚಿವ ಜಗದೀಶ್ ಶೆಟ್ಟರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿರುವ ಚಿಕ್ಕ ಚಿಕ್ಕ ದೋಣಿಗಳನ್ನು ನಿರ್ಮಿಸಿ ನಗರದ ಕಾಟನ್ ಮಾರ್ಕೆಟ್ನಲ್ಲಿ ಹದಗೆಟ್ಟಿರುವ ರಸ್ತೆಯಲ್ಲಿನ ಗುಂಡಿಗಳಲ್ಲಿ ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವು ವರ್ಷಗಳಿಂದ ನಗರದಲ್ಲಿ ರಸ್ತೆಗಳನ್ನು ನಿರ್ಮಿಸುವಲ್ಲಿ ಸಚಿವ ಜಗದೀಶ್ ಶೆಟ್ಟರ್ ವಿಫಲವಾಗಿದ್ದಾರೆ. ಆದ್ದರಿಂದ ಕೂಡಲೇ ನಗರದಲ್ಲಿ ಸುಗಮ ರಸ್ತೆ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.