ಕರ್ನಾಟಕ

karnataka

ETV Bharat / city

ಚಂಡಮಾರುತದಿಂದ ಹತ್ತಿಯಲ್ಲಿ ಹೆಚ್ಚಿದ ತೇವಾಂಶ : ಆತಂಕದಲ್ಲಿ ರೈತ

ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಸೂರ್ಯನ ಕಿರಣಗಳು ಹತ್ತಿ ಮೇಲೆ ಬಿದ್ದರೆ ಮಾತ್ರ ಎಂದಿನಂತೆ ಉತ್ತಮ ಬೆಲೆಗೆ ಹತ್ತಿ‌ ಮಾರಾಟವಾಗುತ್ತದೆ. ಇಲ್ಲವಾದ್ರೆ ಸದ್ಯಕ್ಕೆ ಕ್ವಿಂಟಲ್​ಗೆ 5,400 ರೂ. ಬೆಲೆ ಇದ್ದ ಹತ್ತಿ ದಿಢೀರ್ ಕುಸಿಯುವ ಸಾಧ್ಯತೆ ಇದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ..

ಹತ್ತಿಯಲ್ಲಿ ಹೆಚ್ಚಿದ ತೇವಾಂಶ
ಹತ್ತಿಯಲ್ಲಿ ಹೆಚ್ಚಿದ ತೇವಾಂಶ

By

Published : Nov 29, 2020, 6:34 PM IST

ಹುಬ್ಬಳ್ಳಿ: 'ನಿವಾರ್' ಚಂಡಮಾರುತದ ಪರಿಣಾಮದಿಂದಾಗಿ ಹಿಂಗಾರು ಬೆಳೆ ಹತ್ತಿಯಲ್ಲಿ ತೇವಾಂಶ ಕಂಡು ಬಂದಿದೆ. ಇದರಿಂದಾಗಿ ಬೆಲೆ ಕುಸಿಯುವ ಸಾಧ್ಯತೆ ಇದ್ದು, ರೈತರು ಕಂಗಾಲಾಗುವಂತೆ ಮಾಡಿದೆ.

ಹತ್ತಿಯಲ್ಲಿ ಹೆಚ್ಚಿದ ತೇವಾಂಶ

ನಿವಾರ್ ಚಂಡಮಾರುತದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಜಿಟಿಜಿಟಿ ಮಳೆ ಬರುತ್ತಿದೆ. ಇದರಿಂದಾಗಿ ಹಿಂಗಾರು ಬೆಳೆ ಹತ್ತಿಯಲ್ಲಿ ಹೆಚ್ಚಿನ ತೇವಾಂಶ ಕಂಡು ಬಂದಿದೆ. ಮೊದಲೇ ಮುಂಗಾರಿನಿಂದ ಕಂಗಾಲಾಗಿದ್ದ ರೈತರಿಗೆ ಚಂಡಮಾರುತ ಮತ್ತಷ್ಟು ಶಾಕ್ ನೀಡಿದೆ.

ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಸೂರ್ಯನ ಕಿರಣಗಳು ಹತ್ತಿ ಮೇಲೆ ಬಿದ್ದರೆ ಮಾತ್ರ ಎಂದಿನಂತೆ ಉತ್ತಮ ಬೆಲೆಗೆ ಹತ್ತಿ‌ ಮಾರಾಟವಾಗುತ್ತದೆ. ಇಲ್ಲವಾದ್ರೆ ಸದ್ಯಕ್ಕೆ ಕ್ವಿಂಟಲ್​ಗೆ 5,400 ರೂ. ಬೆಲೆ ಇದ್ದ ಹತ್ತಿ ದಿಢೀರ್ ಕುಸಿಯುವ ಸಾಧ್ಯತೆ ಇದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ರೈತರ ಗೋಳು ಹೇಳ ತೀರದಾಗಿದೆ. ಒಂದೆಡೆ ಸೈಕ್ಲೋನ್ ಎಫೆಕ್ಟ್, ಇನ್ನೊಂದೆಡೆ ಹತ್ತಿ ಬೆಲೆ ಕುಸಿಯುವ ಆತಂಕ. ಇದರ ನಡುವೆ ಸಾಲಗಾರರ‌ ಕಾಟ. ಆದ್ದರಿಂದ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕಿದೆ.

ABOUT THE AUTHOR

...view details