ಕರ್ನಾಟಕ

karnataka

ETV Bharat / city

ಧಾರವಾಡದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುವೆ : ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ - Lok Sabha elections

ಈ ಹಿಂದಿನ ಚುನಾವಣೆಯಲ್ಲಿ ಐವತ್ತು ಸಾವಿರ ಮತಗಳಿಂದ ಪರಾಜಿತಗೊಂಡಿದ್ದೆ. ಈ ಭಾರಿ ಪ್ರಚಂಡ ಬಹುಮತದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ವಿನಯ ಕುಲಕರ್ಣಿ

By

Published : Apr 3, 2019, 11:04 PM IST

ಹುಬ್ಬಳ್ಳಿ : ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಬಿಕ್ಕಟ್ಟು, ಸಮಯದ ಅಭಾವ ಇಲ್ಲದಿರುವುದು ಹಾಗೂ ಹೊರಟ್ಟಿಯವರಂತ ಘಟಾನುಘಟಿ ನಾಯಕರು ನಮ್ಮ ಜೊತೆಗಿರುವ ಹಿನ್ನೆಲೆ ನಾನು ಪ್ರಚಂಡ ಬಹುಮತದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಇಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿರುವ ಮಲಪ್ರಭಾ ಅಚ್ಚುಕಟ್ಟು, ಮಹದಾಯಿ ಸೇರಿದಂತೆ ಹಲವಾರು ಯೋಜನೆಗಳನ್ನು ಪೂರಕವಾಗಿ ಅಭಿವೃದ್ಧಿ ಪಡಿಸುವುದಕ್ಕೆ ನಾನು ಕಂಕಣಬದ್ಧವಾಗಿ‌ ಶ್ರಮಿಸಲಿದ್ದೇನೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿಶ್ವಾಸ

ಈ ಬಾರಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಜೋಶಿಯವರನ್ನು ಹಿಮ್ಮೆಟ್ಟಿಸುತ್ತೇನೆ. ಅವರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಒಗ್ಗಟ್ಟಿನ ಪಾಠವನ್ನು ಕಲಿಸುತ್ತೇನೆ ಎಂದರು‌. ಶಾಕೀರ್ ಸನದಿ ಅವರೊಂದಿಗೆ ಯಾವುದೇ ಮನಸ್ತಾಪ ಉಂಟಾಗಿಲ್ಲ. ಅವರು ಹಾವೇರಿ ನಾಮಪತ್ರ ಸಲ್ಲಿಕೆಯಲ್ಲಿದ್ದಾರೆ. ವಿನಃ ಅವರ ಮತ್ತು ನಮ್ಮ ನಡುವೆ ಯಾವುದೇ ಭಿನಾಭಿಪ್ರಾಯಗಳಿಲ್ಲ ಎಂದರು.

ಈ ಹಿಂದಿನ ಚುನಾವಣೆಯಲ್ಲಿ ಐವತ್ತು ಸಾವಿರ ಮತಗಳಿಂದ ಪರಾಜಿತಗೊಂಡಿದ್ದೆ. ಚುನಾವಣೆಯಲ್ಲಿ ಲಿಂಗಾಯತ ಧರ್ಮ ಹೋರಾಟದ ಪ್ರಭಾವವೂ ನೆರವಾಗಬಹುದು ಎಂದರು.

ABOUT THE AUTHOR

...view details