ಹುಬ್ಬಳ್ಳಿ :ಕೊರೊನಾ ವೈರಸ್ ತಡೆಯಲು ಜಾರಿಯಾಗಿರುವ ಲಾಕ್‌ಡೌನ್ ಆದೇಶವನ್ನ ಹುಬ್ಬಳ್ಳಿ ನಗರದ ಜನ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲವೆಂದು ಕಾಣಿಸ್ತಿದೆ.
ಇವರಿಗೆ ಎಷ್ಟು ಹೇಳಿದ್ರೂ ಅಷ್ಟೇ ಬೀಡ್ರೀ, ಈ ಹುಬ್ಳಿ ಜನಕ್ ಏನಾಗೈತಿ ಅಂತೀನಿ.. - hubli corona effect
ಲಾಕ್‌ಡೌನ್ ಆದೇಶ ಬಂದ ದಿನದಿಂದ ಈವರೆಗೂ ಹುಬ್ಬಳ್ಳಿಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಜನ ಗುಂಪು ಸೇರುವುದು, ತಮ್ಮ ಖಾಸಗಿ ವಾಹನ ಹಾಗೂ ಬೈಕ್‌ಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವುದು ಹಾಗೇ ಮುಂದುವರೆದಿದೆ.
ಲಾಕ್‌ಡೌನ್ ಆದೇಶ ಆದೇಶ ಗಾಳಿಗೆ ತೂರಿ ಮನ ಬಂದಂತಿರುವ ಹುಬ್ಳಿ ಮಂದಿ
ಲಾಕ್‌ಡೌನ್ ಆದೇಶ ಬಂದ ದಿನದಿಂದ ಈವರೆಗೂ ಹುಬ್ಬಳ್ಳಿಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಜನ ಗುಂಪು ಸೇರುವುದು, ತಮ್ಮ ಖಾಸಗಿ ವಾಹನ ಹಾಗೂ ಬೈಕ್‌ಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವುದು ಹಾಗೇ ಮುಂದುವರೆದಿದೆ.
ಮನೆಯಿಂದ ಯಾರೂ ಹೊರಬರಬೇಡಿ ಎಂದು ಸರ್ಕಾರದ ಆದೇಶ ಇದ್ರೂ ಹುಬ್ಬಳ್ಳಿ ಜನ ಅದನ್ನ ಪಾಲಿಸುತ್ತಿಲ್ಲ. ಬೆಳ್ಳಂಬೆಳ್ಳಗೆ ಜನ ಮನೆಯಿಂದ ಹೊರ ಬರುತ್ತಿದ್ದಾರೆ. ಮೊದ್ ಮೊದಲು ಪೊಲೀಸರು ವಾಹನಗಳನ್ನು ಸೀಜ್ ಮಾಡಿ ಕೆಲವರಿಗೆ ಲಾಠಿ ರುಚಿ ತೋರಿಸಿದ್ರು. ಆದರೆ, ಈಗ ಪೊಲೀಸರು ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.