ಹುಬ್ಬಳ್ಳಿ :ನಗರದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ದೇಶದಲ್ಲಿ ಬಿಐಎಸ್ ಮಾನದಂದಂತೆ ಧ್ವಜ ತಯಾರಿಸುವ ಏಕೈಕ ಕೇಂದ್ರ. ಆದರೆ ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಬಟ್ಟೆಯ ಧ್ವಜ ಮಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಇದರ ನಡುವೆಯೂ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದಲ್ಲಿ ರಾಷ್ಟ್ರಧ್ವಜ ತಯಾರಿಸುವ ಏಕೈಕ ಸಂಸ್ಥೆಯಾದ ಖಾದಿ ಗ್ರಾಮೋದ್ಯೋಗ ಕೇಂದ್ರದ ಧ್ವಜಗಳಿಗೆ ಬೇಡಿಕೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವೇಳೆ 'ಹರ್ ಘರ್ ತಿರಂಗಾ' ಕಾರ್ಯಕ್ರಮ ಘೋಷಣೆ ಮಾಡಿದ್ದು, ಇದು ಒಂದು ಕಡೆ ಖಾದಿ ಧ್ವಜಗಳಿಗೆ ಹೊಡೆತ ಕೊಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ. ಮತ್ತೊಂದೆಡೆ ಕಡೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಧ್ವಜಗಳಿಗೆ ಬೇಡಿಕೆ ಇನ್ನೂ ಹೆಚ್ಚಾಗಿದೆ. ಅದರಲ್ಲೂ ಈ ವರ್ಷ ವಹಿವಾಟಿನಲ್ಲಿ ದಾಖಲೆ ಮಟ್ಟದ ಏರಿಕೆಯಾಗಿರುವುದು ಖುಷಿಯ ವಿಚಾರ.
ತ್ರೈಮಾಸಿಕ ವಹಿವಾಟು ಏರಿಕೆ : ಒಂದು ವೇಳೆ ಈ ಅಭಿಯಾನಕ್ಕೆ ನಮ್ಮ ಕೇಂದ್ರದಿಂದಲೇ ರಾಷ್ಟ್ರಧ್ವಜ ಖರೀದಿಯಾಗುತ್ತಿದ್ದರೆ ಸಂಸ್ಥೆಗೆ ಮತ್ತಷ್ಟು ದೊಡ್ಡಮಟ್ಟದ ಆದಾಯ ಬರುತ್ತಿತ್ತು ಎಂಬುದು ಅಧಿಕಾರಿಗಳ ಮಾತು. ಇಲ್ಲಿಯವರೆಗೆ ಲಕ್ಷಾಂತರ ಧ್ವಜಗಳನ್ನು ಮಾರಾಟ ಮಾಡಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಕೇವಲ 82 ಲಕ್ಷ ವಹಿವಾಟು ನಡೆಸಿತ್ತು. ಇದರಿಂದಾಗಿ ಕಳೆದ ಹಣಕಾಸು ಮೊದಲ ತ್ರೈಮಾಸಿಕಕ್ಕಿಂತ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಹಿವಾಟು ಹೆಚ್ಚಾಗಿದೆ.