ಕರ್ನಾಟಕ

karnataka

ETV Bharat / city

ಕೊರೊನಾತಂಕ: ಬಂದ್​​ ಆಗಿದ್ದ ಹುಬ್ಬಳ್ಳಿ ಮಿನಿ ವಿಧಾನಸೌಧ ಕಾರ್ಯಾರಂಭ - hubli mini vidhana souda news

ಮಿನಿ ವಿಧಾನಸೌಧದಲ್ಲಿ ಹುಬ್ಬಳ್ಳಿ ಶಹರ್​, ಗ್ರಾಮೀಣ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸೇರಿ ಹತ್ತಾರು ಇಲಾಖೆಯ ಕಚೇರಿಗಳಿವೆ, ನಿತ್ಯ ನೂರಾರು ಸಿಬ್ಬಂದಿ, ಸಾವಿರಾರು ಜನ ಬಂದು ಹೋಗುತ್ತಾರೆ. ಹಾಗಾಗಿ ಸೋಮವಾರ ಬಂದ್​ ಮಾಡಿದ್ದ ಕಚೇರಿಯನ್ನಿಂದು ಅನಿವಾರ್ಯವಾಗಿ ತೆರೆದು ಮುಂಜಾಗ್ರತಾ ಕ್ರಮಗಳೊಂದಿಗೆ ಎಲ್ಲ ಸಿಬ್ಬಂದಿ ಕೆಲಸವನ್ನು ಪುನಾರಂಭಿಸಿದ್ದಾರೆ.

hubblli-mini-vidhana-soudha
ಬಂದ್​​ ಆಗಿದ್ದ ಮಿನಿ ವಿಧಾನಸೌಧ ಕಾರ್ಯರಂಭ

By

Published : Jul 1, 2020, 5:07 PM IST

ಹುಬ್ಬಳ್ಳಿ: ಇಲ್ಲಿನತಾಲೂಕು ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ )ನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಮಂಗಳವಾರ ಮಿನಿ ವಿಧಾನಸೌಧದ ಎಲ್ಲಾ ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು. ಇಂದು ಎಲ್ಲಾ ಕಚೇರಿಗಳು ಎಂದಿನಂತೆ ಕಾರ್ಯಾರಂಭ ಮಾಡಿವೆ.

ಮಿನಿ ವಿಧಾನಸೌಧದಲ್ಲಿ ಹುಬ್ಬಳ್ಳಿ ಶಹರ್​, ಗ್ರಾಮೀಣ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯತ್​, ಸಮಾಜ ಕಲ್ಯಾಣ ಇಲಾಖೆ ಸೇರಿ ಹತ್ತಾರು ಕಚೇರಿಗಳಿದ್ದು, ನಿತ್ಯ ನೂರಾರು ಸಿಬ್ಬಂದಿ, ಸಾವಿರಾರು ಜನ ಬಂದು ಹೋಗುತ್ತಾರೆ. ಹಾಗಾಗಿ ಸೋಮವಾರ ಬಂದ್​ ಮಾಡಿದ್ದ ಕಚೇರಿಯನ್ನಿಂದು ಅನಿವಾರ್ಯವಾಗಿ ತೆರೆದು​ ಎಲ್ಲ ಸಿಬ್ಬಂದಿ ಕೆಲಸವನ್ನು ಮುಂದುವರಿಸಿದ್ದಾರೆ.

ಮಿನಿ ವಿಧಾನಸೌಧ ಕಾರ್ಯಾರಂಭ

ಎರಡು ಬಾರಿ ಸ್ಯಾನಿಟೈಸೇಷನ್ ಮಾಡಿ 24 ಗಂಟೆಗಳ ಕಾಲ ನಿಗಾ ಇಡಲಾಗಿತ್ತು. ಇದೀಗ ಜನರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಿಯೇ ಒಳಗೆ ಬಿಡಲಾಗುತ್ತುದೆ. ಅಲ್ಲದೇ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕೆಂದು ತಿಳಿ ಹೇಳಲಾಗುತ್ತಿದೆ.

ABOUT THE AUTHOR

...view details